×
Ad

ಕಾರ್ಕಳ: 'ಫೋರ್ಚುನ್ ಲೋಟಸ್' ಲೋಕಾರ್ಪಣೆ

Update: 2023-11-05 19:46 IST

ಕಾರ್ಕಳ: ಕಾರ್ಕಳದ ಜೋಡುರಸ್ತೆಯಲ್ಲಿ ನಿರ್ಮಾಣಗೊಂಡ ಫೋರ್ಚುನ್ ಲೋಟಸ್ ವಾಣಿಜ್ಯ ಸಂಕೀರ್ಣವನ್ನು ಹಿರಿಯ ಸಹಕಾರಿ ದುರೀಣ, ಕರ್ನಾಟಕ ರಾಜ್ಯ ಕೋ ಆ ಮಾರ್ಕೆಟಿಂಗ್ ಫೆಡರೇಶನ್ ಹಾಗೂ ಎಸ್ ಸಿ ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷ ಎಂ ಎನ್ ರಾಜೇಂದ್ರ ಕುಮಾರ್ ಉದ್ಘಾಟಿಸಿದರು.

ಸಾಯಿರಾಧ ಗ್ರೂಪ್‌ನ ಚೇರ್ಮನ್ ಮನೋಹರ್ ಶೆಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕುಕ್ಕುಂದೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಕೆ, ಹಿರಿಯ ನ್ಯಾಯವಾದಿ ಎಂ ಕೆ ವಿಜಯಕುಮಾರ್, ಎಂ ಸಿ ಎಸ್ ಬ್ಯಾಂಕ್ ಸಿಇಒ ಎಂ ಚಂದ್ರಶೇಖರ, ಎಸ್ ಸಿ ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ಇರ್ವತ್ತೂರು ಬಾಸ್ಕರ್ ಕೋಟ್ಯಾನ್, ಮೂಡುಬಿದಿರೆ ಅರಮನೆಯ ಕುಲದೀಪ್ ಎಂ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ಪಾಲುದಾರರಾದ ಅಬುಲಾಲ ಪುತ್ತಿಗೆ, ಮಹೇಂದ್ರ ವರ್ಮ ಜೈನ್, ರೋನಿ ಫೆರ್ನಾಂಡಿಸ್, ಡೆನಿಸ್ ಪಿರೇರಾ ಉಪಸ್ಥಿತರಿದ್ದರು.






 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News