×
Ad

ಕೊಳ್ನಾಡು ಗ್ರಾ.ಪಂ: ಅಧ್ಯಕ್ಷರಾಗಿ ಅಶ್ರಫ್ ಸಾಲೆತ್ತೂರು, ಉಪಾಧ್ಯಕ್ಷರಾಗಿ ಅಸ್ಮಾ ತಾಳಿತ್ತನೂಜಿ

Update: 2023-08-10 21:59 IST

ವಿಟ್ಲ: ವಿಟ್ಲ: ಕೊಳ್ನಾಡು ಗ್ರಾಮ ಪಂಚಾಯತ್‍ನಲ್ಲಿ ಎರಡನೇ ಅವಧಿಯ ಅಧ್ಯಕ್ಷರಾಗಿ ಕೆ ಅಶ್ರಫ್ ಸಾಲೆತ್ತೂರು ಮತ್ತು ಉಪಾಧ್ಯಕ್ಷರಾಗಿ ಎ.ಅಸ್ಮಾ ಅಸೈನಾರ್ ತಾಳಿತ್ತನೂಜಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಮಹಮ್ಮದ್ ಅಶ್ರಫ್ ಸ್ಪರ್ಧಿಸಿದ್ದು ಎದುರಾಳಿಯಾಗಿ ಅದೇ ಪಕ್ಷದ ಎ.ಬಿ.ಅಬ್ದುಲ್ಲಾ ಕಣಕ್ಕಿಳಿದಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಎಂ.ಅಸ್ಮಾ ಅಧಿಕೃತ ಅಭ್ಯರ್ಥಿಯಾಗಿದ್ದರೆ ಪ್ರತಿಸ್ಪರ್ಧಿಯಾಗಿ ಅದೇ ಪಕ್ಷದ ವಸಂತಿಯವರು ಕಣಕ್ಕಿಳಿದಿದ್ದರು.

9ಸದಸ್ಯ ಬಲದ ಬಿಜೆಪಿ ಬೆಂಬಲಿತರು ಕಾಂಗ್ರೆಸ್ ಮುಖಂಡ ಸುಭಾಶ್ಚಂದ್ರ ಶೆಟ್ಟಿಯವರ ಮಣಿಸುವುದಕ್ಕಾಗಿ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸಿದ್ದ ಭಿನ್ನರ ಗುಂಪಿಗೆ ಬೆಂಬಲ ನೀಡಿತ್ತು. ಆದರೆ ಅಂತಿಮವಾಗಿ ಸುಭಾಶ್ಚಂದ್ರ ಶೆಟ್ಟಿ ನೇತೃತ್ವದ ಅಧಿಕೃತ ಅಭ್ಯರ್ಥಿಗಳಾದ ಮಹಮ್ಮದ್ ಅಶ್ರಫ್ ಅಧ್ಯಕ್ಷರಾಗಿಯೂ, ಎಂ.ಅಸ್ಮಾ ಅಸೈನಾರ್ ಉಪಾಧ್ಯಕ್ಷರಾಗಿ ತಲಾ 17-14 ಮತಗಳಿಂದ ಆಯ್ಕೆಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News