×
Ad

ಬೆಳ್ತಂಗಡಿ: ರವಿ ಎನ್ ಅವರಿಗೆ ಪಿಎಚ್ ಡಿ‌ ಪದವಿ

Update: 2025-03-21 12:21 IST

ಕೊಣಾಜೆ: ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ಸಮೀಪದ ಪಾರೆಂಕಿ ಗ್ರಾಮದ‌ ನಡುಬೆಟ್ಟುವಿನ ರವಿ ಎನ್ ಅವರ ' ಪಂಜುರ್ಲಿ ದೈವದ ಪ್ರಾಧಿನ್ಯತೆ, ಪ್ರದರ್ಶನಾತ್ಮಕತೆ: ಮಾನವ ಸಂಪನ್ಮೂಲ ಅಭಿವೃದ್ಧಿ ಆಧಾರಿತ ಅಧ್ಯಯನ' ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಪಿಎಚ್ ಡಿ ಪದವಿಯನ್ನು ನೀಡಿದೆ.

ರವಿ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಹಿರಿಯ ಪ್ರಾಧ್ಯಾಪಕರಾದ ಪ್ರೊ.ಸೋಮಣ್ಣ ಅವರು ಮಾರ್ಗದರ್ಶನ ನೀಡಿದ್ದಾರೆ.

ನಡುಬೆಟ್ಟುವಿನ ಶ್ರೀ ರೌಧ್ರನಾಥೇಶ್ವರ ದೇವಸ್ಥಾನದ ಧರ್ಮದರ್ಶಿಗಳಾಗಿರುವ ರವಿ ಅವರು ನಡುಬೆಟ್ಟುವಿನ ದಿ.ಚೆನ್ನಪ್ಪ ಮೂಲ್ಯ ಹಾಗೂ ಚಂದ್ರಾವತಿ ದಂಪತಿಯ ಪುತ್ರ. 

ಇದೀಗ  ರವಿ ಅವರು ತುಳುನಾಡಿನಲ್ಲಿ ಪ್ರಖ್ಯಾತವಾಗಿರುವ 'ಅಳಿಯ ಕಟ್ಟು ಮತ್ತು ಮಕ್ಕಳ ಕಟ್ಟು ವಿನಲ್ಲಿ ಪಂಜುರ್ಲಿ ದೈವದ ಪ್ರಾಮುಖ್ಯತೆ' ಎಂಬ ವಿಷಯದ ಬಗ್ಗೆ ಡಾಕ್ಟರ್ ಆಫ್ ಲಿಟರೇಚರ್ (ಡಿ. ಲಿಟ್ ) ಪದವಿಗಾಗಿ ಹೆಚ್ಚಿನ ವಿಮರ್ಶಾತ್ಮಕ ಸಾಂಸ್ಕೃತಿಕ ಅಧ್ಯಯನ ನಡೆಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News