ಇಂದು ಕೃಷ್ಣಾಪುರ ಕೇಂದ್ರ ಮೈದಾನದಲ್ಲಿ ಆದರ್ಶ ಸಮ್ಮೇಳನ, ನಶೆ ಮುಕ್ತ ಸಮಾಜ ಅಭಿಯಾನ ಕಾರ್ಯಕ್ರಮ
ಸುರತ್ಕಲ್: ಸುನ್ನೀ ಜಂಇಯತುಲ್ ಉಲಮಾ ಸುರತ್ಕಲ್ ಝೋನ್ ಸಮಿತಿ ವತಿಯಿಂದ ಕೃಷ್ಣಾಪುರ ಕೇಂದ್ರ ಮೈದಾನದಲ್ಲಿ ಇಂದು ಬೃಹತ್ ಆದರ್ಶ ಸಮ್ಮೇಳನ ಮತ್ತು ನಶೆ ಮುಕ್ತ ಸಮಾಜ ಅಭಿಯಾನ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಸಯ್ಯಿದ್ ಝೈನುಲ್ ಆಬಿದ್ ತಂಙಳ್ ಅಲ್ ಹಾದಿಯವರು ದುಆ ನೆರವೇರಿಸಲಿದ್ದು, SJU ಸುರತ್ಕಲ್ ಝೋನ್ ಅಧ್ಯಕ್ಷರಾದ ಅಬ್ದುಲ್ಲ ಮದನಿಯವರು ಅಧ್ಯಕ್ಷತೆ ವಹಿಸಲಿದ್ದಾರೆ.
ಕೃಷ್ಣಾಪುರ ಖಾಝಿ ಈಕೆ ಇಬ್ರಾಹಿಂ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.
ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಮೌಲಾನ ಅಲವೀ ಸಖಾಫಿ ಉಸ್ತಾದರು ಆದರ್ಶ ಪ್ರಭಾಷಣ ನಡೆಸಲಿದ್ದು, ಅಮಲು ಪದಾರ್ಥಗಳ ಬಗ್ಗೆ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸುಫ್ಯಾನ್ ಸಖಾಫಿ ಯವರು ಜಾಗೃತಿ ಭಾಷಣ ಮಾಡಲಿದ್ದಾರೆ.
ಸಂಜೆ ನಾಲ್ಕು ಗಂಟೆಗೆ ಮಾದಕದ್ರವ್ಯದ ವಿರುದ್ಧ ಮದ್ರಸ ಮಕ್ಕಳಿಂದ ಕೃಷ್ಣಾಪುರ ಮಸೀದಿ ವಠಾರದಿಂದ ಚೊಕ್ಕಬೆಟ್ಟು ಸರ್ಕಲ್ ತನಕ ಬೃಹತ್ ಕಾಲ್ನಡಿಗೆ ಜಾಥ ನಡೆಯಲಿದೆ ಎಂದು ಸ್ವಾಗತ ಸಮಿತಿ ಕನ್ವೀನರ್ ಉಮರುಲ್ ಫಾರೂಖ್ ಸಖಾಫಿ ಕಾಟಿಪಳ್ಳ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.