×
Ad

ಮಂಗಳೂರು: ಬಾಗಲಕೋಟೆಯ ಯುವಕನ ಕೊಲೆ

Update: 2024-09-21 21:25 IST

ಮಂಗಳೂರು: ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯ ತೋಟಬೆಂಗ್ರೆಯ ಬೀಚ್ ಬಳಿ ಹೊರ ಜಿಲ್ಲೆಯ ಕಾರ್ಮಿಕ ನೊಬ್ಬನನ್ನು ಹರಿತವಾದ ಆಯುಧದಿಂದ ಹಲ್ಲೆ ನಡೆಸಿ ಕೊಲೆಗೈದ ಕೃತ್ಯ ಶನಿವಾರ ಬೆಳಕಿಗೆ ಬಂದಿದೆ.

ಕೊಲೆಯಾದ ಕಾರ್ಮಿಕನನ್ನು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಮುತ್ತು ಬಸವರಾಜ ವಡ್ಡರ್ (39) ಎಂದು ಗುರುತಿಸಲಾಗಿದೆ.

ಎರಡು ವಾರದ ಹಿಂದೆ ಕೂಲಿ ಕೆಲಸ ಅರಸಿಕೊಂಡು ಬಂದಿದ್ದ ಈತನಿಗೆ ಯಾರೋ ಹಲ್ಲೆ ನಡೆಸಿ ಕೊಲೆಗೈದಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News