ಮಂಗಳೂರು| ಇಬ್ಬರು ಯುವ ಬ್ಯಾಡ್ಮಿಂಟನ್ ಪ್ರತಿಭೆಗಳಿಗೆ ಕಂಚಿನ ಪದಕ
Update: 2025-09-11 19:19 IST
ಮಂಗಳೂರು, ಸೆ.11: ಬೆಂಗಳೂರಿನ ಸಿಎಪಿಎಸ್‌ಎ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಪ್ರತಿಷ್ಠಿತ ಯೋನೆಕ್ಸ್ ಸನ್‌ರೈಸ್ ರಾಜ್ಯ ರ‍್ಯಾಂಕಿಂಗ್ ಪಂದ್ಯಾವಳಿಯಲ್ಲಿ ಮಂಗಳೂರಿನ ಯುವ ಬ್ಯಾಡ್ಮಿಂಟನ್ ಪ್ರತಿಭೆ ಕಿಯಾನ್ ಪಿ.ಸಿ. ಮತ್ತು ಸಾಗರದ ವೈಭವ್ ಕೆ.ಆರ್. ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
15ರ ಹರೆಯದೊಳಗಿನ ಈ ಸ್ಪರ್ಧೆಯಲ್ಲಿ ಕಿಯಾನ್ ಮತ್ತು ವೈಭವ್ ಅವರ ಸ್ಥಿರ ಪ್ರದರ್ಶನವು ರಾಜ್ಯ ಬ್ಯಾಡ್ಮಿಂಟನ್ ಕ್ಷೇತ್ರದ ಉದಯೋನ್ಮುಖ ತಾರೆಗಳಲ್ಲಿ ಮನ್ನಣೆ ಗಳಿಸಿದ್ದಾರೆ. ಬಾಲ ಪ್ರತಿಭೆ ಕಿಯಾನ್ ಮತ್ತು ವೈಭವ್‌ರ ಕೌಶಲ್ಯ ಮತ್ತು ಹೋರಾಟದ ಮನೋಭಾವಕ್ಕೆ ತರಬೇತುದಾರರು ಮತ್ತು ಸಹ ಆಟಗಾರರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಇಬ್ಬರ ಸಾಧನೆಯು ಅವರ ಭವಿಷ್ಯದ ಕ್ರೀಡಾ ಪ್ರಯಾಣದಲ್ಲಿ ಮಹತ್ವದ ಹೆಜ್ಜೆಯನ್ನು ಸೂಚಿಸುತ್ತದೆ ಎಂದು ತರಬೇತುದಾರರು ಅಭಿಪ್ರಾಯಪಟ್ಟಿದ್ದಾರೆ.