×
Ad

ಮಂಗಳೂರು: ವಕೀಲರಿಗೆ ಹಲ್ಲೆ ಆರೋಪ; ಪ್ರಕರಣ ದಾಖ ದಾಖಲು

Update: 2024-11-04 22:48 IST

ಮಂಗಳೂರು: ತನ್ನ ಕಕ್ಷಿದಾರರ ಸ್ಥಳದ ವೀಕ್ಷಣೆಗೆ ತೆರಳಿದ ವೇಳೆ ವಕೀಲರ ಮೇಲೆ ಹಲ್ಲೆಗೈದ ಘಟನೆ ನಡೆದಿರುವುದಾಗಿ ವರದಿಯಾಗಿದೆ.

ಮಂಗಳೂರು ವಕೀಲರ ಸಂಘದ ಹಿರಿಯ ವಕೀಲ ಕೆ.ಶಂಭು ಶರ್ಮ ಹಲ್ಲೆಗೊಳಗಾದವರು. ಇವರಿಗೆ ಚಂದ್ರಹಾಸ ಶ್ರೀಯಾನ್ ಎಂಬಾತ ಹಲ್ಲೆಗೈದಿರುವುದಾಗಿ ಆರೋಪಿಸಲಾಗಿದೆ.

ವಕೀಲರಾದ ಶಂಭು ಶರ್ಮ ಕರ್ತವ್ಯ ನಿಮಿತ್ತ ಕಕ್ಷಿದಾರರ ಸ್ಥಳದ ವೀಕ್ಷಣೆಗೆ ಹೋದಾಗ ಚಂದ್ರಹಾಸ ಶ್ರೀಯಾನ್ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಾನೆ ಎಂದು ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಂಭು ಶರ್ಮರ ಮೇಲಿನ ಹಲ್ಲೆಯನ್ನು ಮಂಗಳೂರು ವಕೀಲರ ಸಂಘ ಖಂಡಿಸಿದೆ. ಹಲ್ಲೆ ನಡೆಸಿದ ವ್ಯಕ್ತಿಯ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂಘದ ಅಧ್ಯಕ್ಷ ರಾಘವೇಂದ್ರ ಎಚ್.ವಿ ಹಾಗೂ ಪ್ರಧಾನ ಕಾರ್ಯದರ್ಶಿ ಶ್ರೀಧರ ಎಚ್. ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News