×
Ad

ಮಂಗಳೂರು| ಸೆಲೂನ್‌ನಲ್ಲಿ ದಾಂಧಲೆ ಪ್ರಕರಣ: 14 ಮಂದಿ ಸೆರೆ

Update: 2025-01-23 19:36 IST

ಮಂಗಳೂರು, ಜ.23: ನಗರದ ಬಿಜೈ ಕೆಎಸ್ಸಾರ್ಟಿಸಿ ಬಸ್ ತಂಗುದಾಣ ಬಳಿಯ ಯುನಿಸೆಕ್ಸ್ ಸೆಲೂನ್‌ವೊಂದಕ್ಕೆ ಗುರುವಾರ ಮಧ್ಯಾಹ್ನ ನುಗ್ಗಿ ದಾಂಧಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 14 ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತರನ್ನು ಫರಂಗಿಪೇಟೆಯ ಹರ್ಷರಾಜ್ ಯಾನೆ ಹರ್ಷಿತ್, ಮೂಡುಶೆಡ್ಡೆಯ ಮೋಹನದಾಸ್ ಯಾನೆ ರವಿ, ಉಪ್ಪಳದ ಪುರಂದರ, ವಾಮಂಜೂರು ಅಂಬೇಡ್ಕರ್ ನಗರದ ಸಚಿನ್, ಉಳಾಯಿಬೆಟ್ಟುವಿನ ರವೀಶ್, ಬೆಂಜನಪದವು ಶಿವಾಜಿನಗರದ ಸುಖೇತ್, ವಾಮಂಜೂರಿನ ಅಂಕಿತ್, ಮೂಡುಶೆಡ್ಡೆ ಶಿವಾಜಿನಗರದ ಕಾಲಿಮುತ್ತು, ತಾರಿಗುಡ್ಡೆಯ ಅಭಿಲಾಶ್, ಮೂಡುಶೆಡ್ಡೆಯ ದೀಪಕ್, ಸರಿಪಳ್ಳದ ವಿಘ್ನೇಶ್, ಮಂಗಳೂರಿನ ಶರಣ್ ರಾಜ್, ಮೂಡುಶೆಡ್ಡೆಯ ಪ್ರದೀಪ್ ಪೂಜಾರಿ ಮತ್ತು ಪ್ರಸಾದ್ ಅತ್ತಾವರ ಎಂಬವರನ್ನು ಬಂಧಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News