×
Ad

ಮಾರುತಿ ಸುಝುಕಿ "ಇ ವಿಟಾರ" ಎಲೆಕ್ಟ್ರಿಕ್ ಕಾರು ಮಂಗಳೂರು ಮಾರುಕಟ್ಟೆಗೆ ಬಿಡುಗಡೆ

Update: 2026-02-19 21:11 IST

ಮಂಗಳೂರು: ಮಾರುತಿ ಸುಝುಕಿಯ ಎಲೆಕ್ಟ್ರಿಕ್ ಕಾರು "ಇ ವಿಟಾರ"ವನ್ನು ನಗರದ ಭಾರತ್ ಆಟೋಕಾರ್ಸ್ ಲಿಮಿಟೆಡ್‌ ನ ನೆಕ್ಸಾ ಪ್ರದರ್ಶನ ಮಳಿಗೆಯಲ್ಲಿಂದು ದಾಯ್ಜಿವರ್ಲ್ಡ್ ಸಮೂಹದ ಆಡಳಿತ ನಿರ್ದೇಶಕ ವಾಲ್ಟರ್ ನಂದಳಿಕೆ ಅವರು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.

ನಂತರ ಮಾತನಾಡಿದ ಅವರು, ಎಲೆಕ್ಟ್ರಿಕ್ ಕಾರುಗಳಿಗೆ ಒಳ್ಳೆಯ ಭವಿಷ್ಯವಿದೆ. ಕಾರುಗಳ ಚಾಲನೆಯ ಜೊತೆ ಸುರಕ್ಷತೆಗೂ ಹೆಚ್ಚು ಒತ್ತು ನೀಡಬೇಕಾಗಿದೆ ಎಂದರು.


ಮುಖ್ಯ ಅತಿಥಿಯಾಗಿ ಖ್ಯಾತ ವೈದ್ಯರಾದ ಡಾ.ಮುರಳೀಧರ ಯಡಿಯಾಳ್ ಭಾಗವಹಿಸಿ ಮಾತನಾಡುತ್ತಾ ಎಲೆಕ್ಟ್ರಿಕ್ ಕಾರುಗಳು ಹೆಚ್ಚು ಪರಿಸರ ಸ್ನೇಹಿಯಾಗಿದೆ. ಇದರಿಂದ ಸಾಕಷ್ಟು ಇಂಧನ ಉಳಿಸಬಹುದು, ಪರಿಸರವನ್ನು ಕಾರ್ಬನ್ ನಿಂದ ಮುಕ್ತವಾಗಿಸಬಹುದು. ಭವಿಷ್ಯದಲ್ಲಿ ಈ ಕಾರುಗಳು ಇನ್ನಷ್ಟು ಜನಪ್ರಿಯವಾಗಬಹುದು ಎಂದು ಶುಭ ಹಾರೈಸಿದರು.


ಮಾರುತಿ ಸುಝುಕಿ ಏರಿಯಾ ಮ್ಯಾನೇಜರ್ ಮಾಯಾಂಕ್ ಚೋತಿವಾಲ್ ಮಾತನಾಡುತ್ತಾ, ದೇಶದಲ್ಲಿ ಸುಮಾರು 1000 ಚಾರ್ಜಿಂಗ್ ಪಾಯಿಂಟ್ ಗಳಿವೆ. ಈ ಕೇಂದ್ರಗಳ ಮಾಹಿತಿ ಪಡೆಯಲು ಆ್ಯಪ್ ಕೂಡ ಗ್ರಾಹಕರು ಬಳಸಬಹುದಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ಭಾರತ್ ಬೀಡಿ ಸಂಸ್ಥೆಯ ಅಧ್ಯಕ್ಷ ಸುಬ್ರಾಯ ಪೈ, ಭಾರತ್ ಆಟೋ ಕಾರ್ಸ್ ಲಿ.ಇದರ ಆಡಳಿತ ನಿರ್ದೇಶಕ ಸುಧೀರ್ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶೋ ರೂಂ ಮ್ಯಾನೇಜರ್ ಸೂರಜ್ ವಂದಿಸಿದರು. ಪೂಜಾ ಬಂಗೇರಾ ಕಾರ್ಯಕ್ರಮ ನಿರೂಪಿಸಿದರು.































Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News