×
Ad

ಮಾದಕ ವ್ಯಸನಿಗಳ ವಿರುದ್ಧ ಬೃಹತ್ ಜನಜಾಗೃತಿ ಜಾಥಾ

Update: 2025-01-29 13:41 IST

ಉಳ್ಳಾಲ : ಲಿಮ್ರಾ ಎಜು ಗ್ರೂಪ್ ಆಫ್ ಕರ್ನಾಟಕ ಇದರ ಆಶ್ರಯದಲ್ಲಿ ಮಾದಕ ವ್ಯಸನಿಗಳ ವಿರುದ್ಧ ದೇರಳಕಟ್ಟೆಯಿಂದ ಮಂಗಳೂರು ಮಿನಿ ವಿಧಾನಸೌಧದವರೆಗೆ  ಬೃಹತ್ ಜನಜಾಗೃತಿ ಜಾಥಾ ಬುಧವಾರ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಜ್ಞಾ ಸಂಸ್ಥೆ ನಿರ್ದೇಶಕ ಪ್ರೋ.ಹಿಲ್ಡಾ ರಾಯಪ್ಪನ್ ಅವರು, ಈ ಸಮಸ್ಯೆ ಈಗ ದೊಡ್ಡದಾಗಿ ಬೆಳೆದಿದ್ದು, ಇದರ ವಿರುದ್ಧ ಹೋರಾಟ ಅಗತ್ಯವಿದೆ. 40 ವರ್ಷದ ಮೊದಲೇ ಪ್ರಜ್ಞಾ ಕೌನ್ಸಿಲ್ ವತಿಯಿಂದ ಜಾಗೃತಿ ಕಾರ್ಯಕ್ರಮ ನಡೆದಿತ್ತು. ಈ ಮಾದಕ ದ್ರವ್ಯ ಸಮಸ್ಯೆ ಇತ್ಯರ್ಥ ಕಾಣುವವರೆಗೆ ಹೋರಾಟ ಕೈಬಿಡಲಾಗದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಸ್.ಬಿ.ದಾರಿಮಿ ಹೈದರ್ ಪರ್ತೀಪ್ಪಾಡಿ,ಕೆ.ಇ.ಸಾಲೆತ್ತೂರು, ಹೈದರ್ ಪರ್ತಿಪ್ಪಾಡಿ, ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ, ರವೀಂದ್ರ ಶೆಟ್ಟಿ ಉಳಿದೊಟ್ಟು, ನರೇಗ ಯೋಜನೆ ಒಂಬಡ್ಸ್ ಮೆನ್ ಕೃಷ್ಣ ಮೂಲ್ಯ , ಜನ ಶಿಕ್ಷಣ ಟ್ರಸ್ಟ್ ನ ಶೀನ ಶೆಟ್ಟಿ, ಕಿನ್ಯ ಸಮಸ್ತ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಶನ್ ಅಧ್ಯಕ್ಷ ಇಬ್ರಾಹೀಂ ಕೊಣಾಜೆ, ಸಾಮಾಜಿಕ ಹೋರಾಟಗಾರ ಇಸ್ಮತ್ ಪಜೀರ್, ಹಜ್ ಸಮಿತಿ ಮಾಜಿ ಸದಸ್ಯ ಕೆ.ಎಂ.ಸಿದ್ದೀಕ್ ಮೋಂಟುಗೋಳಿ, ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಕಿನ್ಯ ರೇಂಜ್ ಅಧ್ಯಕ್ಷ ಅಬ್ದುಲ್ ಲತೀಫ್ ದಾರಿಮಿ, ಉಪಾಧ್ಯಕ್ಷ ಎಸ್.ಬಿ.ಮಹಮ್ಮದ್ ಹನೀಫ್, ಕಾರ್ಯದರ್ಶಿ ಮುಸ್ತಫಾ ಫೈಝಿ, ದೇರಳಕಟ್ಟೆ ರೇಂಜ್ ಕೋಶಾಧಿಕಾರಿ ಅಬೂಬಕ್ಕರ್ ಸ್ವಾಗತ್, ಜಾಫರ್ ಫೈಝಿ, ಜಲಾಲ್ ಬಾಗ್ ಮಸೀದಿ ಖತೀಬ್ ಎಮ್.ಕೆ.ಅಬ್ದುಲ್ ರಹಿಮಾನ್‌ ಫೈಝಿ ಮತ್ತಿತರರು ಉಪಸ್ಥಿತರಿದ್ದರು.

ಶೇಖ್ ಮೊಹಮ್ಮದ್ ಇರ್ಫಾನಿ ಕಾರ್ಯಕ್ರಮ ನಿರೂಪಿಸಿದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News