ಕಂದಕ್: ಗಲ್ಲಿ ಪ್ರೀಮಿಯರ್ ಲೀಗ್ ಸೀಸನ್- 5ರ ಜೆರ್ಸಿ ಅನಾವರಣ
ಮಂಗಳೂರು, ಡಿ.25: ನಗರದ ಕಂದಕ್‌ನಲ್ಲಿ ದಿ.ಸರೋಜಿನಿ ಪುಂಡಲೀಕ ಕರ್ಕೇರ ಬೆಂಗ್ರೆ ಸ್ಮರಣಾರ್ಥ ಗಲ್ಲಿ ಪ್ರೀಮಿಯರ್ ಲೀಗ್ ಸೀಸನ್-5 ಕಂದಕ್-2025-26 ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ಜೆರ್ಸಿ ಅನಾವರಣ ಕಾರ್ಯಕ್ರಮವು ಕಂದಕ್ ಗಲ್ಲಿ ಕ್ರೀಡಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ವಕೀಲ ಕೆಪಿಎ ಶುಕೂರ್, ಸರೋಜಿನಿ ಪುಂಡಲೀಕ ಕರ್ಕೇರರ ಪುತ್ರ ಹಾಗೂ ಉದ್ಯಮಿ ಭಾಸ್ಕರ್ ಬೆಂಗ್ರೆ, ಗಲ್ಲಿ ಪ್ರೀಮಿಯರ್ ಲೀಗ್ ಸ್ಥಾಪಕಾಧ್ಯಕ್ಷ ಮತ್ತು ಮಾಜಿ ಕಾರ್ಪೊರೇಟರ್ ಅಬ್ದುಲ್ ಲತೀಫ್, ಢೈಕಿನ್ ಫಿಶರೀಸ್ ಮಾಲಕ ಬಿ. ಇದ್ದಿನ್ ಕುಂಞಿ, ಅನಿವಾಸಿ ಉದ್ಯಮಿಗಳಾದ ಶರೀಫ್ ಕಂದಕ್, ಅಬ್ದುಲ್ ವಹಾಬ್, ಎಎಟಿ ಮಾಲಕ ಅಬ್ದುಲ್ ಅಝೀಝ್, ಉದ್ಯಮಿಯಾದ ದೀಪಕ್ ಶೆಟ್ಟಿ, ಕಮಲಕ್ಷಾ ಜೆ. ಸಹಿತ ಕ್ರಿಕೆಟ್ ತಂಡದ ಮಾಲಕರು, ನಾಯಕರು ಉಪಸ್ಥಿತರಿದ್ದರು. ಶ್ರೇಯಾಸ್ ಹೊಯಿಗೆ ಬಝಾರ್ ಕಾರ್ಯಕ್ರಮ ನಿರೂಪಿಸಿದರು.
ಈ ಟೂರ್ನಿಯಲ್ಲಿ ಕಂದಕ್ ಸೂಪರ್ ಕಿಂಗ್, ಕಂದಕ್ ಯುನೈಟೆಡ್, ಕಂದಕ್ ಬುಲ್ಸ್, ಕಂದಕ್ ವಾರಿಯರ್ಸ್, ರಾಯಲ್ ಕಂದಕ್, ಕಂದಕ್ ನೈಟ್ ರೈಡಸ್ ಸಹಿತ 6 ತಂಡಗಳು ಭಾಗವಹಿಸಲಿದೆ. ಜಿಪಿಎಲ್-5ನ ಉದ್ಘಾಟನಾ ಪಂದ್ಯ ಡಿ.26ರಂದು ಕಂದಕ್ ನೈಟ್ ರೈಡರ್ ಮತ್ತು ಕಂದಕ್ ಯುನೈಟೆಡ್ ನಡುವೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.