ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟ: ಬದ್ರಿಯಾ ಹೆಲ್ತ್ ಲೀಗ್ ಸುರತ್ಕಲ್ ತಂಡಕ್ಕೆ 4 ವಿಭಾಗದಲ್ಲಿ ಪ್ರಶಸ್ತಿ
ಖೇಲೋ ಇಂಡಿಯಾ, ಫಿಟ್ ಇಂಡಿಯಾ ಆಂದೋಲನ
Update: 2025-12-25 20:04 IST
ಮಂಗಳೂರು: ಶ್ರೀನಿವಾಸ್ ಮಲ್ಯ ಒಳ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಬದ್ರಿಯಾ ಹೆಲ್ತ್ ಲೀಗ್ ಸುರತ್ಕಲ್ ತಂಡವು 4 ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿತು.
61 ಕೆಜಿ ವಿಭಾಗದಲ್ಲಿ ನಾಶಲ್ ದ್ವೀತಿಯ, 57 ಕೆಜಿ ವಿಭಾಗದಲ್ಲಿ ಇಶಾಮ್ ತೃತೀಯ, 50 ಕೆಜಿ ವಿಭಾಗದಲ್ಲಿ ನದಾಫ್ ತೃತೀಯ ಹಾಗು 65 ಕೆಜಿ ವಿಭಾಗದಲ್ಲಿ ಅಬ್ದುಲ್ಲಾ ಸಹದ್ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.
ವಿಕಸಿತ ಭಾರತಕ್ಕಾಗಿ ಕ್ರೀಡೆಯಿಂದ ಯುವಕರನ್ನು ಸದೃಢಗೊಳಿಸುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ʼಖೇಲೋ ಇಂಡಿಯಾ ಹಾಗೂ ಫಿಟ್ ಇಂಡಿಯಾʼ ಆಂದೋಲನದ ಭಾಗವಾಗಿ ದ.ಕ. ಜಿಲ್ಲೆಯ ಸಂಸದ ಬ್ರಿಜೇಶ್ ಚೌಟ ಹಾಗೂ ದ.ಕ. ಜಿಲ್ಲಾ ಅಮೆಚೂರ್ ಕುಸ್ತಿ ಸಂಘ ಇದರ ಜಂಟಿ ಆಶ್ರಯದಲ್ಲಿ ಶ್ರೀನಿವಾಸ್ ಮಲ್ಯ ಒಳ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟ ನಡೆಯಿತು.