×
Ad

ನರಿಂಗಾನದಲ್ಲಿ ಕ್ರೀಡಾಂಗಣ‌ ನಿರ್ಮಾಣ‌ ಶ್ರೀಘ್ರ ಆರಂಭ; ಕ್ರೀಡಾ ಸಚಿವ ಬಿ. ನಾಗೇಂದ್ರ ಭರವಸೆ

Update: 2024-01-14 21:34 IST

ಕೊಣಾಜೆ: ರಾಜ್ಯ ಸರಕಾರ ಮತ್ತು ರಾಜ್ಯ ಕ್ರೀಡಾ ಇಲಾಖೆ ಕಂಬಳ ಸೇರಿದಂತೆ ಕ್ರೀಡೆಗೆ ಉತ್ತೇಜನ ನೀಡಲು ಬದ್ಧವಾಗಿದ್ದು, ಕಂಬಳಕ್ಕೆ ಅನುದಾನ ಬಿಡುಗಡೆ ಸೇರಿದಂತೆ ನರಿಂಗಾನದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಯುವಜನ ಮತ್ತು ಕ್ರೀಡಾ ಸಚಿವ ಬಿ. ನಾಗೇಂದ್ರ ಅಭಿಪ್ರಾಯಪಟ್ಟರು.

ಉಳ್ಳಾಲ ತಾಲೂಕಿನ ನರಿಂಗಾನದ ಲವ- ಕುಶ ಜೋಡುಕರೆ ಕಂಬಳ ಸಮಿತಿ ಆಶ್ರಯದಲ್ಲಿ ನರಿಂಗಾನದ ಮೋರ್ಲ ಬೋಳದಲ್ಲಿ ನಡೆದ ದ್ವಿತೀಯ ವರ್ಷದ ಹೊನಲು ಬೆಳಕಿನ ಲವ-ಕುಶ ಜೋಡುಕರೆ `ನರಿಂಗಾನ ಕಂಬಳೋತ್ಸ'ವದಲ್ಲಿ ಭಾಗವಹಿಸಿ ಮಿತ್ತಕೋಡಿ ಶರತ್ ಕಾಜವ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಂಗಳೂರಿನ ಕಂಬಳವನ್ನು ಬೆಂಗಳೂರಿನಲ್ಲಿ ಆಯೋಜನೆ ಮಾಡಿದಾಗ ಕ್ರೀಡಾ ಇಲಾಖೆ ಒಂದು ಕೋಟಿ ರೂ. ಕೊಟ್ಟಿದೆ. ಕರಾವಳಿಯಲ್ಲಿ ನಡೆಯುವ ಕಂಬಳಕ್ಕೂ ಪ್ರೋತ್ಸಾಹ ನೀಡಲು ಸಿದ್ಧವಿದೆ ಎಂದರು.

ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಎಲ್ಲಾ ಜಾತಿ, ಧರ್ಮದವರು ಸೇರಿ ಮಾಡುವ ಸಾರ್ವಜನಿಕ ಕಂಬಳವಾಗಿದ್ದು, ಇದು ಸೌಹಾರ್ಧತೆಯ ಪ್ರತೀಕವಾಗಿದೆ ಎಂದರು.

ಮಾಜಿ ಸಚಿವ ರಮಾನಾಥ ರೈ, ವಿದಾನಸಭಾ ಸದಸ್ಯ ಹರೀಶ ಕುಮಾರ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಕ್ರೀಡಾ ಕಮಿಷನರ್ ಶಶಿಕುಮಾರ್, ಕಣಚೂರು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಯು.ಕಣಚೂರು ಮೋನು, ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ, ಇಂಟಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ, ದ.ಕ.ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ, ಮಂಜನಾಡಿ ದರ್ಗಾ ಅಧ್ಯಕ್ಷ ಅಬ್ದುಲ್ ಅಜೀಝ್ ಮೈಸೂರು ಬಾವ, ದ.ಕ.ಜಿಲ್ಲಾ ಬಸ್ಸು ಮಾಲಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ, ಮುಂಬೈಯ ಉದ್ಯಮಿ ವಿವೇಕ್ ಶೆಟ್ಟಿ ಬೊಲ್ಯಗುತ್ತು, ದೇರಳಕಟ್ಟೆಯ ದ.ಕಂಫಟ್ರ್ಸ್ ಇನ್‍ನ ಚಂದ್ರಹಾಸ ಶೆಟ್ಟಿ, ರಕ್ಷಿತ್ ಶಿವರಾಮ್, ಮೆಸ್ಕಾಂನ ವ್ಯವಸ್ತಾಪಕ ನಿರ್ದೇಶಕಿ ಡಿ. ಪದ್ಮಾವತಿ, ಕಟಪಾಡಿ ಕಂಬಳದ ರೋಹಿತ್ ಹೆಗ್ಡೆ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಪಜೀರುಗೇದಗೆಬೈಲ್‍ನಲ್ಲಿ ಲವ - ಕುಶ ಕಂಬಳವನ್ನು 25 ವರುಷಗಳ ಕಾಲ ಮುನ್ನಡೆಸಿದ ಮಿತ್ತಕೋಡಿ ವೆಂಕಪ್ಪ ಕಾಜವ ಮತ್ತು ಉಮೇಶ್ ಮಹಾಬಲ ಶೆಟ್ಟಿ ಮಾಣಿಸಾಗು ಅವರನ್ನು ಗೌರವಿಸಲಾಯಿತು.

ಕಂಬಳ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತ್ ಕಾಜವ ಸ್ವಾಗತಿಸಿದರು. ನವಾಝ್ ನರಿಂಗಾನ ಮತ್ತು ಜೋಸೆಫ್ ಕುಟಿನ್ಹ ಸಮ್ಮಾನ ಪತ್ರ ವಾಚಿಸಿದರು. ಸತೀಶ್ ಕುಮಾರ್ ಹಾಗೂ ಅಬ್ದುಲ್ ರಝಾಕ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News