×
Ad

ಕಿನ್ನಿಗೋಳಿ: ಆರ್ಥಿಕವಾಗಿ ಹಿಂದುಳಿದ ಒಂದು ಜೋಡಿಯ ವಿವಾಹ ಕಾರ್ಯಕ್ರಮ

Update: 2023-10-04 15:22 IST

ಕಿನ್ನಿಗೋಳಿ, ಅ.4: ಮುಹಿಯುದ್ದೀನ್ ಜುಮಾ ಮಸ್ಜಿದ್ ಮತ್ತು ನೂರುಲ್ ಇಸ್ಲಾಂ ಅಸೋಸಿಯೇಶನ್ ಕಿನ್ನಿಗೋಳಿ ಇದರ ಬೆಳ್ಳಿ ಹಬ್ಬದ ಪ್ರಯುಕ್ತ ಆರ್ಥಿಕವಾಗಿ ಹಿಂದುಳಿದ ಒಂದು ಜೋಡಿಯ ವಿವಾಹ ಸಮಾರಂಭವು ಅ.1ರಂದು ಮಸೀದಿಯ ಸಭಾಭವನದಲ್ಲಿ ನಡೆಯಿತು.

ಗುರುವಾಯನಕೆರೆಯ ಸಾದತ್ ತಂಙಳ್ ಅವರು ನಿಖಾಹ್ ನೆರವೇರಿಸಿದರು.‌ ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷರಾದ ಕೆ. ಎಮ್.ಆಶ್ರಫ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಅಬ್ದುಲ್ ಲತೀಫ್ ಸಖಾಫಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಟಿ.ಹೆಚ್. ಮಯ್ಯದ್ಧಿ, ಮಸೀದಿಯ ಉಸ್ತಾದರಾದ ಅಬ್ದುಲ್ ಲತೀಫ್ ಸಖಾಫಿ, ಸದರ್ ಉಸ್ತಾದ್ ಅಬೂಬಕ್ಕರ್ ಸಿದ್ದಿಕ್, ಗೌರವಧ್ಯಕ್ಷ ಅಬ್ದುಲ್ ರಹಿಮಾನ್, ಉಪಾಧ್ಯಕ್ಷ ಅಬ್ದುಲ್ ಖಾದರ್ ಆದರ್ಶ, ಕಾರ್ಯದರ್ಶಿ ರಮೀಝ್ ಕಾಪಿಕಾಡ್, ರಫೀಕ್ ಫ್ಲವರ್, ರಫೀಕ್ ಮಟನ್, ರಝಾಕ್ ಗೊಳಿಜಾರ, ರಹೀಮ್ ಖುಷಿ ಕಾರ್, ಶಂಸುದ್ದೀನ್ ಶೂ ಫ್ಯಾಷನ್, ಟಿ.ಎಮ್. ಮುಹಮ್ಮದ್ ಆರೀಫ್, ಫಯಾಝ್ ಟೊಕಿಯೊ, ಶಬೀರ್ ಕಾಪಿಕಾಡ್, ಹಿದಾಯತುಲ್ಲ, ಇಮಾಮ್ ಕಾಪಿಕಾಡ್, ಅರ್ಫಾಝ್ ಕಾಪಿಕಾಡ್ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮನ್ನು ಹಾಫಿಲ್ ಗುತ್ತಾಕಾಡು ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News