ಮಂಗಳೂರು: ಪತ್ರಕರ್ತರು - ಪೊಲೀಸ್ ಮಧ್ಯೆ ಸೌಹಾರ್ದ ಕ್ರಿಕೆಟ್ ಪಂದ್ಯ
Update: 2023-11-28 19:56 IST
ಮಂಗಳೂರು : ನಗರದ ನೆಹರು ಮೈದಾನದಲ್ಲಿ ಮಂಗಳವಾರ ನಡೆದ ಮಂಗಳೂರು ಪೊಲೀಸ್ ಮತ್ತು ಪತ್ರಕರ್ತರ ಸಂಘದ ನಡುವಿನ ಸೌಹಾರ್ದ ಕ್ರಿಕೆಟ್ ಪಂದ್ಯದಲ್ಲಿ ಮಂಗಳೂರು ಪೊಲೀಸ್ ಆಯುಕ್ತರ ತಂಡ ಪ್ರಥಮ ಹಾಗೂ ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ತಂಡ ದ್ವಿತೀಯ ಸ್ಥಾನ ಗಳಿಸಿದೆ.
ಪಂದ್ಯದ ಬಳಿಕ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಪ್ರಶಸ್ತಿ ವಿತರಿಸಿದರು. ಉಪ ಪೊಲೀಸ್ ಆಯುಕ್ತರಾದ ದಿನೇಶ್ ಕುಮಾರ್, ಉಮೇಶ್ (ಸಿ.ಆರ್), ಎಸಿಪಿಗಳಾದ ಮಹೇಶ್, ಪಿ.ಪಿ.ಹೆಗ್ಡೆ, ರವೀಶ್, ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್, ಕಾರ್ಯಕಾರಿ ಸಮಿತಿ ಸದಸ್ಯ ರಾಜೇಶ್ ದಡ್ಡಂಗಡಿ ಉಪಸ್ಥಿತರಿದ್ದರು. ಪೊಲೀಸ್ ತಂಡದ ಪರವಾಗಿ ಶರಣ್ ಹಾಗೂ ಪತ್ರಕರ್ತರ ತಂಡದ ಪರವಾಗಿ ರಾಜೇಶ್ ಕೆ. ಪ್ರಶಸ್ತಿ ಸ್ವೀಕರಿಸಿದರು.