ವಿಟ್ಲ ಕೇಂದ್ರ ಜುಮಾ ಮಸೀದಿಯ ನೂತನ ಅಧ್ಯಕ್ಷರಾಗಿ ಅಶ್ರಫ್ ಮುಹಮ್ಮದ್ ಪೊನ್ನೋಟು
Update: 2023-12-17 15:43 IST
ಅಶ್ರಫ್ ಮುಹಮ್ಮದ್ ಪೊನ್ನೋಟು
ವಿಟ್ಲ, ಡಿ.17: ವಿಟ್ಲ ಕೇಂದ್ರ ಜುಮಾ ಮಸೀದಿಯ ನೂತನ ಅಧ್ಯಕ್ಷರಾಗಿ ಅಶ್ರಫ್ ಮುಹಮ್ಮದ್ ಪೊನ್ನೋಟು ಆಯ್ಕೆಯಾಗಿದ್ದಾರೆ.
ನಿರ್ಗಮನ ಅಧ್ಯಕ್ಷ ಇಬ್ರಾಹೀಂ ಮೇಗಿನಪೇಟೆ ಅಧ್ಯಕ್ಷತೆಯಲ್ಲಿ ನಡೆದ ವಿಟ್ಲ ಕೇಂದ್ರ ಜುಮಾ ಮಸೀದಿಯ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.
ಉಪಾಧ್ಯಕ್ಷರಾಗಿ ವಿ.ಎಸ್.ಇಬ್ರಾಹೀಂ ಹಾಗೂ ಮಹಮ್ಮದ್ ಗಮಿ, ಪ್ರಧಾನ ಕಾರ್ಯದರ್ಶಿಯಾಗಿ ಇಸ್ಮಾಯೀಲ್ ಶಾಫಿ, ಕಾರ್ಯದರ್ಶಿಯಾಗಿ ಅಬೂಬಕರ್ ಅನಿಲಕಟ್ಟೆ, ಕೋಶಾಧಿಕಾರಿಯಾಗಿ ಶರೀಫ್ ಪೊನ್ನೋಟು, ಲೆಕ್ಕ ಪರಿಶೋಧಕರಾಗಿ ಇಕ್ಬಾಲ್ ಶೀತಲ್ ಹಾಗೂ ಹಮೀದ್ ಬದ್ರಿಯಾ ಸರ್ವಾನುಮತದಿಂದ ಆಯ್ಕೆಯಾದರು.
17 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.