ದ.ಕ. ಜಿಲ್ಲಾ ಎಸ್.ವೈ.ಎಸ್ ವತಿಯಿಂದ ಅಲ್ ನುಬಾತ ಖತೀಬ್ ಸಂಗಮ
ಕೊಣಾಜೆ: ಎಸ್.ವೈ.ಎಸ್ ದ.ಕ ವೆಸ್ಟ್ ಜಿಲ್ಲಾ ಸಮಿತಿ ವತಿಯಿಂದ ಎಸ್.ವೈ.ಎಸ್ ಸಂಘಟನೆಯ 30 ನೇ ವಾರ್ಷಿಕದ ಭಾಗವಾಗಿ ಅಲ್ ನುಬಾತ ಖತೀಬ್ ಹಾಗೂ ಇಮಾಮ್ ಸಂಗಮ ಎಸ್.ವೈ.ಎಸ್ ಜಿಲ್ಲಾಧ್ಯಕ್ಷ ವಿ ಯು.ಇಸ್ಹಾಕ್ ಝುಹ್ರಿ ಅಧ್ಯಕ್ಷತೆಯಲ್ಲಿ ಅಲ್ ಮದೀನಾ ಮಂಜನಾಡಿ ಶರಫುಲ್ ಉಲಮಾ ಆಡಿಟೋರಿಯಮ್ ನಲ್ಲಿ ನಡೆಯಿತು.
ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ಚಟ್ಟಕ್ಕಳ್ ದುಆ: ನಡೆಸಿದರು. ಎಸ್.ವೈ.ಎಸ್ ರಾಜ್ಯ ಉಪಾಧ್ಯಕ್ಷ ಸಯ್ಯಿದ್ ಹಾಮಿಮ್ ತಂಙಳ್ ಉದ್ಘಾಟಿಸಿದರು. ಎಸ್.ವೈ.ಎಸ್ ರಾಜ್ಯ ನಾಯಕ ಮುಹಮ್ಮದಲಿ ಸಖಾಫಿ ಅಶ್ಹರಿಯ್ಯಾ ಪ್ರಾಸ್ತಾವಿಕ ಭಾಷಣ ಮಾಡಿದರು. ಇಬ್ರಾಹಿಂ ಸಖಾಫಿ ಪುಝಕಾಟಿರಿ ಕೇರಳ ಮುಖ್ಯ ಪ್ರಭಾಷಣ ಮಾಡಿದರು.
ಸಯ್ಯಿದ್ ಜಲಾಲುದ್ದೀನ್ ತಂಙಳ್ ಮದಕ, ಕೆಕೆ ಮುಹಿಯ್ಯದ್ದೀನ್ ಕಾಮಿಲ್ ಸಖಾಪಿ, ಮಹಮ್ಮದ್ ಮದನಿ ಪೂಡಲ್,ಅಲ್ ಮದೀನಾ ಮುದರ್ರಿಸ್ ಮುಹಮ್ಮದ್ ಕುಂಞಿ ಅಂಜದಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿ ಖಲೀಲ್ ಮಾಲಿಕಿ, ಬಶೀರ್ ಮದನಿ ಅಲ್ ಕಾಮಿಲಿ, ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಕಿನ್ಯ, ಅಶ್ರಪ್ ಸಅದಿ ಮಲ್ಲೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಹಾಜಿ ಪ್ರಿಂಟೆಕ್, ಕೋಶಾಧಿಕಾರಿ ನಝೀರ್ ಮುಡಿಪು, ಹಾಫಿಳ್ ಯಾಕೂಬ್ ಸಅದಿ ನಾವೂರು, ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ, ಕಾಸಿಂ ಲತೀಫಿ ಮಂಜನಾಡಿ, ಮುತ್ತಲಿಬ್ ಮೂಡಬಿದಿರೆ, ಮಜೀದ್ ಸಖಾಫಿ ಅಮ್ಮುಂಜೆ, ಮಹ್ಮೂದ್ ಸಅದಿ ಕುಕ್ಕಾಜೆ ಮೊದಲಾದವರು ಉಪಸ್ಥಿತರಿದ್ದರು.
ಸಯ್ಯಿದ್ ಶರಪುದ್ದೀನ್ ಅಲ್ ಹೈದ್ರೋಸಿ ತಂಙಳ್ ಪರೀದ್ ನಗರ ಸಮಾರೋಪ ದುಆ: ಗೆ ನೇತೃತ್ವ ನೀಡಿದರು. ಜಿಲ್ಲಾ ಕಾರ್ಯದರ್ಶಿ ಬದ್ರುದ್ದೀನ್ ಅಝ್ಹರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.