×
Ad

ಸಚ್ಚೇರಿಪೇಟೆ: ಕೆನರಾ ಬ್ಯಾಂಕ್ - ಗ್ರಾಹಕರ ಸಭೆ

Update: 2023-12-17 19:34 IST

ಕಾರ್ಕಳ : ಕೆನರಾ ಬ್ಯಾಂಕ್ ಸಚ್ಚೇರಿಪೇಟೆ ಶಾಖೆಯ ವತಿಯಿಂದ ಗ್ರಾಹಕರ ಸಭೆ ಶನಿವಾರ ಸಚ್ಚೇರಿಪೇಟೆಯ ಶಾಖೆಯಲ್ಲಿ ಜರಗಿತು.

ಬ್ಯಾಂಕಿನ ಶಾಖಾ ಪ್ರಬಂಧಕ ಲಿಬಿನ್ ಮಾತನಾಡಿ, ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡುವುದು ನಮ್ಮ ಆದ್ಯತೆಯಾಗಿದೆ. ಯಾವುದೇ ಲೋಪಗಳಿದ್ದರೂ ಮುಕ್ತವಾಗಿ ನಮ್ಮೊಂದಿಗೆ ಹಂಚಬಹುದಾಗಿದೆ. ಉತ್ತಮ ಕಾರ್ಯಗಳ ಮೂಲಕ ಗ್ರಾಹಕರಿಗೆ ಇನ್ನಷ್ಟು ಸೇವೆ ನೀಡುವುದು ಮುಖ್ಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬ್ಯಾಂಕ್ ಗ್ರಾಹಕರಾದ ರಮೇಶ್ ಶೆಟ್ಟಿ ಸಚ್ಚರಪರಾರಿ, ಸುಬೋಧ ಶೆಟ್ಟಿ ಸಚ್ಚರಪರಾರಿ, ಜಗದೀಶ್ ಶೆಟ್ಟಿ ಸಚ್ಚರಪರಾರಿ, ವಿಕಾಸ್ ಶೆಟ್ಟಿ ಬೋಳಪರಾರಿ, ಶರತ್ ಶೆಟ್ಟಿ ಸಚ್ಚೇರಿಪೇಟೆ, ಪ್ರಭಾಕರ ಕಾಮತ್, ಪೌಲ್ ಡಿಸೋಜ ಮತ್ತಿತ ರರು ಸಲಹೆ ಸೂಚನೆಗಳನ್ನು ನೀಡಿದರು. ಬ್ಯಾಂಕ್ ಸಿಬ್ಬಂದಿ ಕಾರ್ತಿಕ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News