×
Ad

ಸಂತ ಅಲೋಶಿಯಸ್ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸೌಹಾರ್ದ ಕ್ರಿಸ್ಮಸ್ ಆಚರಣೆ

Update: 2023-12-23 19:16 IST

ಮಂಗಳೂರು, ಡಿ.23: ನಗರದ ಸಂತ ಅಲೋಶಿಯಸ್ ಕೈಗಾರಿಕಾ ತರಬೇತಿ ಸಂಸ್ಥೆಯ ವತಿಯಿಂದ ಶುಕ್ರವಾರ ಸೌಹಾರ್ದ ಕ್ರಿಸ್ಮಸ್ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಬ್ರಹ್ಮ ಕುಮಾರಿ ವಿಶ್ವೇಶ್ವರಿ, ಅಬುಲ್ ಅಫಾ ಯೂಸುಫ್ ಜಹ್ರಿ, ಜೋಸೆಫ್ ಕ್ರಾಸ್ತಾ ಭಾಗವಹಿಸಿದ್ದರು.

ತಾರಾ ಸ್ಪರ್ಧೆ, ಕರೋಲ್ ಗಾಯನ, ಗ್ರೀಟಿಂಗ್ಸ್ ಕಾರ್ಡ್ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಂಸ್ಥೆಯ ವಠಾರದಲ್ಲಿ ದ್ವಿತೀಯ ವರ್ಷದ ಇಲೆಕ್ಟ್ರಿಷಿಯನ್ ವೃತ್ತಿ ವಿಭಾಗದ ವಿದ್ಯಾರ್ಥಿಗಳು ಗೋದಲಿಯನ್ನು ಮಾಡಿದರು.

ಸಂಸ್ಥೆಯ ನಿರ್ದೇಶಕ ವಂ. ಫಾ.ಜಾನ್ ಡಿಸೋಜ ಎಸ್‌ಜೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲ ರೋಶನ್ ಡಿಸೋಜ, ಉಪ ಪ್ರಾಂಶುಪಾಲ ಆಲ್ವಿನ್ ಮೆನೆಜಸ್, ತರಬೇತಿ ಅಧಿಕಾರಿ ನೋಯೆಲ್ ಲೋಬೋ, ಕಾರ್ಯಕ್ರಮದ ಸಂಚಾಲಕ ನವೀನ್ ಮತ್ತು ವಿದ್ಯಾರ್ಥಿ ಪರಿಷತ್‌ನ ನಾಯಕನಾದ ಎನ್. ಶಶಾಂಕ್ ಉಪಸ್ಥಿತರಿದ್ದರು.

ಸಂಸ್ಥೆಯ ತರಬೇತಿ ಅಧಿಕಾರಿ ನೋಯೆಲ್ ಲೋಬೋ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಲಿಖಿತ್ ವಂದಿಸಿದರು. ಯಶವಂತ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News