×
Ad

ವಿಜಯಪುರ - ಮಂಗಳೂರು ಜಂಕ್ಷನ್ ನಡುವೆ ವಿಶೇಷ ರೈಲು

Update: 2023-12-28 18:27 IST

ಮಂಗಳುರು: ವಿಜಯಪುರ - ಮಂಗಳೂರು ಜಂಕ್ಷನ್ ನಡುವೆ ವಿಶೇಷ ರೈಲು ಜನವರಿ 1ರಿಂದ ಮಾರ್ಚ್ 31ರ ತನಕ ಪ್ರತಿದಿನ ಸಂಚರಿಸಲಿದೆ.

ವಿಜಯಪುರ - ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ಡೈಲಿ ವಿಶೇಷ ರೈಲು (ಸಂಖ್ಯೆ. 07377) ಜ.1ರಂದು ಸಂಜೆ 18:35 ಗಂಟೆಗೆ ವಿಜಯಪುರದಿಂದ ಹೊರಟು ಮರುದಿನ 12:40 ಗಂಟೆಗೆ ಮಂಗಳೂರು ಜಂಕ್ಷನ್‌ಗೆ ತಲುಪಲಿದೆ.

ಮಂಗಳೂರು ಜಂಕ್ಷನ್ - ವಿಜಯಪುರ ಎಕ್ಸ್‌ಪ್ರೆಸ್ ಡೈಲಿ ವಿಶೇಷ ರೈಲು (ರೈಲು ಸಂಖ್ಯೆ 07378 )ಮಂಗಳೂರು ಜಂಕ್ಷನ್‌ನಿಂದ ಜ.2ರಂದು ಮಧ್ಯಾಹ್ನ 2:50 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 9:35 ಗಂಟೆಗೆ ವಿಜಯಪುರವನ್ನು ತಲುಪಲಿದೆ. ಇದೇ ರೀತಿ ರೈಲು ಮುಂದೆ ಓಡಾಟ ನಡೆಸಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News