×
Ad

ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನಲ್ಲಿ ‘ರಾಷ್ಟ್ರೀಯ ರಸ್ತೆ ಸುರಕ್ಷತಾ ದಿನಾಚರಣೆ

Update: 2024-01-12 17:21 IST

ಮಂಗಳೂರು, ಜ.12: ‘‘ಪ್ರತಿಯೊಬ್ಬರೂ ಸಂಚಾರಿ ನಿಯಮಗಳನ್ನು ಪಾಲಿಸಬೇಕು. ನಿಯಮಗಳಿರುವುದು ನಮ್ಮ ಏಳಿಗೆ ಗಾಗಿ, ದೇಶದ ಬೆಳವಣಿಗೆಗಾಗಿ. ನಾವು ಸಂಚಾರಿ ನಿಯಮಗಳನ್ನು ಅನುಸರಿಸುವುದರಿಂದ ನಮ್ಮ ಜೀವದ ಜೊತೆಗೆ ನಮ್ಮನ್ನು ನಂಬಿದವರನ್ನು ಹಾಗೂ ಇತರ ಜೀವರಾಶಿಗಳನ್ನು ಸುರಕ್ಷಿತವಾಗಿ ಕಾಪಾಡಲು ಸಾಧ್ಯ ಎಂದು ಮಂಗಳೂರು ನಗರ ಸಂಚಾರಿ ವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ಗೀತಾ ಡಿ. ಕುಲಕರ್ಣಿ ಹೇಳಿದ್ದಾರೆ.

ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನಲ್ಲಿ ಆಯೋಜಿಸಲಾದ ‘ರಾಷ್ಟ್ರೀಯ ರಸ್ತೆ ಸುರಕ್ಷತಾ ದಿನ 2024ರ’ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಎಲ್ಲದಕ್ಕೂ ತಾಳ್ಮೆ ಅತ್ಯಗತ್ಯ. ಸರ್ವರೂ ಸಂಚಾರಿ ನಿಯಮಗಳನ್ನು ತಮ್ಮಲ್ಲಿ ಅಳವಡಿಸಿಕೊ0ಡಾಗ ಸುಂದರ ಭಾರತದ ಕನಸು ನನಸಾಗಲು ಸಾಧ್ಯ ಎಂದರು.

ಶಾಲೆಯ ಪ್ರಾಂಶುಪಾಲ ವಂ.ಫಾ. ರಾಬರ್ಟ್ ಡಿ’ಸೋಜ ಅವರು ವಿದ್ಯಾರ್ಥಿಗಳು ಉತ್ತಮ ಚಟುವಟಿಕೆಗಳನ್ನು ರೂಢಿಸಿ ಕೊಳ್ಳಿ. ನಿಮ್ಮನ್ನು ನೀವು ಒಳ್ಳೆಯ ಕೆಲಸಗಳಿಂದ ಗುರುತಿಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಯಮೂಲಕ ನಾಗರಿಕ ಸೇವೆ ಗಳಲ್ಲಿ ತೊಡಗಿಸಿಕೊಂಡು ಸಮಾಜದಲ್ಲಿ ಹಿರಿಯರು, ಮಹಿಳೆಯರು, ಮಕ್ಕಳ ಸೇವೆಯಲ್ಲಿ ಭಾಗವಹಿಸಿ. ನಿಮ್ಮ ಘನತೆ, ವ್ಯಕ್ತಿತ್ವ, ಸಮಯ ಪ್ರಜ್ಞೆಯಿಂದ ನಿಮ್ಮನ್ನು ನೀವು ನಂಬುವ ಮೂಲಕ ದೇಶದ ಆದರ್ಶ ನಾಗರಿಕರಾಗಿ ಬಾಳುವಂತೆ ಕರೆ ನೀಡಿದರು.

ವಿದ್ಯಾರ್ಥಿಗಳಾದ ರಿಷಿಕಾ ಎಸ್. ಬಲ್ಲಾಳ್ ಸ್ವಾಗತಿಸಿದರು. ತನ್ವಿ ಶೆಟ್ಟಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಭೂಮಿಕಾ ಎಸ್. ಅಂಚನ್ ಕಾರ್ಯಕ್ರಮ ನಿರೂಪಿಸಿದರು. ರೋಶನ್ ಸಿಕ್ವೇರಾ ಕಾರ್ಯಕ್ರಮವನ್ನು ಸಂಯೋಜಿಸಿದರು. ರತ್ನಾಕರ ಎಸ್. ಆಚಾರ್ಯ, ಪದ್ಮಶ್ರೀ ಭಟ್ ಮತ್ತು ಐವನ್ ಮಸ್ಕರೇನ್ಹಸ್ ಸಹಕರಿಸಿದರು. ಪ್ರಾಂಜಲ್ ಬಿ. ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News