ಫರಂಗಿಪೇಟೆ: ಮರ್ಕಝ್-ಅಲ್ ಹುದಾ ಮದ್ರಸ ವಿದ್ಯಾರ್ಥಿಗಳ ಪ್ರತಿಭೋತ್ಸವ
ಮಂಗಳೂರು: ಸೌತ್ ಕರ್ನಾಟಕ ಸಲಫಿ ಮೂವ್ಮೆಂಟ್ ಮಂಗಳೂರು ಇದರ ಫರಂಗಿಪೇಟೆ ಘಟಕದ ವತಿಯಿಂದ ಮರ್ಕಝ್- ಅಲ್-ಹುದಾ ಮದ್ರಸ ವಿದ್ಯಾರ್ಥಿಗಳ ಪ್ರತಿಭೋತ್ಸವ ಕಾರ್ಯಕ್ರಮವು ಇತ್ತೀಚೆಗೆ ಫರಂಗಿಪೇಟೆ ಸಲಫಿ ಮೈದಾನದಲ್ಲಿ ನಡೆಯಿತು.
ಎಸ್ಕೆಎಸ್ಸೆಂ ಕೇಂದ್ರ ಸಮಿತಿಯ ಅಧ್ಯಕ್ಷ ಬಶೀರ್ ಅಹ್ಮದ್ ಶಾಲಿಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಲಫಿ ಎಜುಕೇಶನ್ ಬೋರ್ಡ್ ಅಧ್ಯಕ್ಷ ಹನೀಫ್ ಬೋಳಂತೂರು ‘ಮದ್ರಸ ವಿದ್ಯಾಭ್ಯಾಸ ಮತ್ತು ಮಕ್ಕಳ ಬಾಧ್ಯತೆ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಎಸ್ಕೆಎಸ್ಸೆಂ ಕೋಶಾಧಿಕಾರಿ ಅಬ್ದುಲ್ ಸತ್ತಾರ್ ಆಸ್ಕೋ, ದಾರುಲ್ ಖೈರ್ ಎಜುಕೇಶನಲ್ ಅಕಾಡಮಿಯ ಸಹ ಸಂಚಾಲಕ ಅಶ್ರಫ್ ಮಾಸ್, ಘಟಕದ ಅಧ್ಯಕ್ಷ ಸೈಯ್ಯದ್ ಬಾವ, ಉಪಾಧ್ಯಕ್ಷ ರಶೀದ್ ಕರ್ಮಾರ್, ಮದ್ರಸ ಅಧ್ಯಕ್ಷ ಶಬೀರ್ ಕಾಸಿಂ, ಎಸ್‌ಇಬಿ ಕಾರ್ಯದರ್ಶಿ ಅಬೂ-ಬಿಲಾಲ್ ಎಸ್‌ಎಂ, ಸಿರಾಜ್ ಮಾಸ್ಟರ್, ಮಸೀದಿಯ ಇಮಾಮ್ ಹಾಫಿಝ್ ಇಮ್ತಿಯಾಝ್, ಮದ್ರಸದ ಶಿಕ್ಷಕ ಸರ್ದಾಲ್ ಉಪಸ್ಥಿತರಿದ್ದರು.
ಮಗ್ರಿಬ್ ನಮಾಝ್ ಬಳಿಕ ನಡೆದ ಕಾರ್ಯಕ್ರಮದಲ್ಲಿ ಶಿಹಾಬ್ ತಲಪಾಡಿ ಪ್ರಾಸ್ತಾವಿಕ ಭಾಷಣ ಮಾಡಿದರು. ಫರಂಗಿಪೇಟೆ ಸೆಂಟರ್‌ನಲ್ಲಿ ನಡೆದ ‘ಲರ್ನ್ ದಿ ಕುರ್‌ಆನ್’ನ 11ನೇ ಮತ್ತು 12ನೇ ಹಂತದ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದವ ರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಮುಸ್ತಫಾ ದಾರಿಮಿ ‘ದಾರಿ ತಪ್ಪುತ್ತಿರುವ ನಮ್ಮ ಮಕ್ಕಳು’ ಮತ್ತು ಮೌಲವಿ ಅಹ್ಮದ್ ಅನಸ್ ‘ಅಂಧಕಾರದಿಂದ ಪ್ರಕಾಶದೆಡೆಗೆ’ ಎಂಬ ವಿಷಯದಲ್ಲಿ ಪ್ರವಚನ ನೀಡಿದರು.
ವೇದಿಕೆಯಲ್ಲಿ ಎಸ್ಕೆಎಸ್ಸೆಂ ನೇತಾರ ಯುಎನ್ ಅಬ್ದುಲ್ ರಝ್ಝಾಕ್, ಬಶೀರ್ ಶಾಲಿಮಾರ್, ಹಸನ್ ಸಚ್ಚರಿಪೇಟೆ, ಅಹ್ಮದ್ ಮಾಸ್ಟರ್, ಬಾಷಾ ಕಂಕನಾಡಿ, ಜಬ್ಬಾರ್ ಮಾರಿಪಳ್ಳ, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಸದಸ್ಯ ರಹೀಮ್ ಬಿ.ಸಿ.ರೋಡ್, ಹನೀಫ್ ಪಾಡಿ, ಲತೀಫ್ ಬಬ್ಬುಕಟ್ಟೆ ಉಪಸ್ಥಿತರಿದ್ದರು.