×
Ad

ಪುತ್ತೂರು: ಬನ್ನೂರು ತಾಜುಲ್ ಉಲಮಾ ಸುನ್ನಿ ಚಾರಿಟೇಬಲ್ ಟ್ರಸ್ಟ್ ಪದಾಧಿಕಾರಿಗಳ ಆಯ್ಕೆ

Update: 2024-02-04 18:24 IST

ಪುತ್ತೂರು: ಇಲ್ಲಿನ ಬನ್ನೂರು ತಾಜುಲ್ ಉಲಮಾ ಸುನ್ನಿ ಚಾರಿಟೇಬಲ್ ಟ್ರಸ್ಟ್ ಇದರ ನೂತನ ಪದಾಧಿಕಾರಿಗಳ ಆಯ್ಕೆಯು ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಅವರ ನೇತೃತ್ವದಲ್ಲಿ ನಡೆಯಿತು.

ಸಯ್ಯಿದ್ ಆಬಿದ್ ತಂಙಳ್ ಅಧ್ಯಕ್ಷತೆಯನ್ನು ವಹಿಸಿದ್ದರು. ಬನ್ನೂರು ಬದ್ರಿಯಾ ಜುಮಾ ಮಸೀದಿಯ ಮುದರ್ರೀಸ್ ಸಿರಾಜುದ್ದೀನ್ ಸಖಾಫಿ ಕನ್ಯಾನ ಉದ್ಘಾಟನೆ ನೆರೆವೇರಿಸಿದರು.

ನೂತನ ನಿರ್ದೇಶಕರಾಗಿ ಅಬುಲ್ ಬುಷ್ರ ಅಬ್ದುರ್ರಹ್ಮಾನ್ ಫೈಝಿ, ಇಸ್ಮಾಯೀಲ್ ಹಾಜಿ ಬನ್ನೂರು, ಅಬೂಬಕ್ಕರ್ ಹಾಜಿ ವಾಡರಗುದಿ ಆಯ್ಕೆಯಾದರು.

ಚೇರ್ ಮಾನ್ ಆಗಿ ಅಬ್ದುಲ್ ಮಜೀದ್ ಪಡೀಲ್, ವೈಸ್ ಚೇರ್ಮನ್ ಆಗಿ ಸಯ್ಯಿದ್ ಆಬಿದ್ ತಂಞಳ್, ಫಾರೂಖ್ ಬನ್ನೂರು, ಪ್ರಧಾನ ಕಾರ್ಯದರ್ಶಿಯಾಗಿ ಮೊಹಮ್ಮದ್ ಸೈಫುಲ್ಲಾ ಸಅದಿ ಬನ್ನೂರು, ಜೊತೆ ಕಾರ್ಯದರ್ಶಿಗಳಾಗಿ ಸಮೀರ್ ಬನ್ನೂರು, ಅಮೀಮ್ ಬನ್ನೂರು, ಕೋಶಾಧಿಕಾರಿಯಾಗಿ ಆಶ್ರಫ್ KM ಕರ್ಮಲ ಆಯ್ಕೆಯಾದರು. ಸದಸ್ಯರುಗಳಾಗಿ ಉಮರ್ ವಾಡರಗುದಿ, ಇಬ್ರಾಹೀಂ ಕಟ್ಟೆ, ಸಾದಿಕ್ ಬನ್ನೂರು ಹಾಗೂ ಟ್ರಸ್ಟ್ GCC ಪ್ರತಿನಿಧಿಗಳಾಗಿ ಬಶೀರ್ KSA, ರಝಾಕ್ KSA, ಜಮಾಲ್ ಖತ್ತಾರ್, ರಿಯಾಝ್ ಖತ್ತಾರ್, ಹನೀಫ್ ಕುವೈತ್, ಝಹೀರ್ KSA ಅವರನ್ನು ನೇಮಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News