×
Ad

ಯೋಗಾಸನದಲ್ಲಿ ಹೊಸದಾಖಲೆ ಬರೆದ ಪ್ರತ್ಯಕ್ಷ ಕುಮಾರ್

Update: 2024-02-06 18:41 IST

ಮಂಗಳೂರು, ಫೆ.6: ಆರೋಗ್ಯಧಾಮ ಯೋಗ ವಿದ್ಯಾ ಟ್ರಸ್ಟ್ (ರಿ) ಮಂಗಳೂರು ಇದರ ಅಂಗಸಂಸ್ಥೆಯಾದ ತಪಸ್ವಿ ಯೋಗ ಕೇಂದ್ರವು ಬಿಕರ್ಣಕಟ್ಟೆಯಲ್ಲಿ ಆಯೋಜಿಸಿದ ಬುಕ್ ಆಫ್ ರೆಕಾರ್ಡ್ ಕಾರ್ಯಕ್ರಮದಲ್ಲಿ ಬಿಕರ್ಣಕಟ್ಟೆಯ ಪ್ರತ್ಯಕ್ಷ ಕುಮಾರ್ ಅವರು ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ‘ಇಂಟರ್‌ನ್ಯಾಶನಲ್ ಬುಕ್ ಆಫ್ ರೆಕಾರ್ಡ್’ ನಲ್ಲಿ ದಾಖಲೆ ಬರೆದಿದ್ದಾರೆ.

ಪ್ರತ್ಯಕ್ಷ ಕುಮಾರ್ ಅವರು ಪದ್ಮ ಶೀರ್ಷಾಸನ ಭಂಗಿಯ ಯೋಗಾಸನದಲ್ಲಿ 16 ನಿಮಿಷ , 14 ಸೆಕೆಂಡ್‌ಗಳ ದಖಲೆಯನ್ನು ಮುರಿದು 35 ನಿಮಿಷ ಮತ್ತು 34 ಸೆಕೆಂಡ್‌ಗಳ ಕಾಲ ನಿಲ್ಲುವ ಮೂಲಕ ‘ ‘ಇಂಟರ್‌ನ್ಯಾಶನಲ್ ಬುಕ್ ಆಫ್ ರೆಕಾರ್ಡ್’ ಎಂಬ ದಾಖಲೆಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಚಿಕ್ಕಂದಿನಲ್ಲೇ ಯೋಗಾಸನದಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದ ಪ್ರತ್ಯಕ್ಷ ಕುಮಾರ್ ಅವರು ಬಿಕರ್ಣಕಟ್ಟೆಯ ಚಂದ್ರಶೇಖರ ಹೆಗ್ಡೆ ಮತ್ತು ಸುರೇಖ ಹೆಗ್ಡೆ ದಂಪತಿಯ ಪುತ್ರ. ಪ್ರತ್ಯಕ್ಷ ಕುಮಾರ್ ಇದೀಗ ಮಂಗಳೂರು ವಿವಿಯ ಯೋಗವಿಜ್ಞಾನ ವಿಭಾಗದಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News