×
Ad

ಕೋರಂ ಕೊರತೆ: ತೆಂಕನಿಡಿಯೂರು ಗ್ರಾಪಂ ತಿಂಗಳ ಸಾಮಾನ್ಯ ಸಭೆ ರದ್ದು

Update: 2024-02-08 22:14 IST

ಉಡುಪಿ: ಇಲ್ಲಿನ ತೆಂಕನಿಡಿಯೂರು ಗ್ರಾಮ ಪಂಚಾಯತ್‌ನ ತಿಂಗಳ ಸಾಮಾನ್ಯ ಸಭೆ ಕೋರಂ ಇಲ್ಲದೆ ರದ್ದುಗೊಂಡ ಘಟನೆ ಗುರುವಾರ ನಡೆದಿದೆ.

ಉಡುಪಿ ತಾಲೂಕಿನ ತೆಂಕನಿಡಿಯೂರು ಗ್ರಾಮ ಪಂಚಾಯತ್‌ನ ತಿಂಗಳ ಸಾಮಾನ್ಯ ಸಭೆ ಗುರುವಾರ ಅಧ್ಯಕ್ಷರ ನೇತೃತ್ವ ದಲ್ಲಿ ನಿಗದಿಯಾಗಿತ್ತು. ತೆಂಕನಿಡಿಯೂರು ಗ್ರಾಮ ಪಂಚಾಯತ್‌ನಲ್ಲಿ ಪ್ರಸ್ತುತ ಬಿಜೆಪಿ ಬೆಂಬಲಿತ ಸದಸ್ಯರ ಆಡಳಿತವಿದ್ದು 14 ಮಂದಿ ಬಿಜೆಪಿ ಬೆಂಬಲಿತ ಸದಸ್ಯರು ಹಾಗೂ 12 ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಹೊಂದಿದೆ.

ಗುರುವಾರ ಸಾಮಾನ್ಯ ಸಭೆಯನ್ನು ಪಂಚಾಯತ್ ಅಧ್ಯಕ್ಷರೇ ನಿಗದಿ ಮಾಡಿದ್ದು ಸಭೆಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸಹಿತ ಬಿಜೆಪಿ ಎಲ್ಲಾ ಸದಸ್ಯರು ಗೈರುಹಾಜರಾಗಿದ್ದು ಕಾಂಗ್ರೆಸ್ ಬೆಂಬಲಿತ 10 ಮಂದಿ ಸದಸ್ಯರು ಮಾತ್ರ ಹಾಜರಾಗಿದ್ದರು.

ಸಭೆಯ ಸಮಯ ಮೀರಿ ಹೋದರೂ ಸದಸ್ಯರು ಹಾಜರಾಗದ ಹಿನ್ನಲೆ ಯಲ್ಲಿ ಕೋರಂ ಇಲ್ಲದ ಕಾರಣ ಸಭೆಯನ್ನು ರದ್ದು ಗೊಳಿಸಲಾಯಿತು. ಸಭೆಗೂ ಮುನ್ನ ಪಂಚಾಯತ್ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರು ಗ್ರಾಪಂಗೆ ಆಗಮಿಸಿದ್ದರೂ ಕೂಡ ಸಾಮಾನ್ಯ ಸಭೆಗೆ ಹಾಜರಾಗದೆ ಗೈರಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News