ದಾರುನ್ನೂರ್ ಮಂಗಳೂರು ವಲಯದ ವಾರ್ಷಿಕ ಮಹಾಸಭೆಯ ನೂತನ ಸಮಿತಿ ಅಸ್ತಿತ್ವಕ್ಕೆ
ಮಂಗಳೂರು,ಫೆ.14: ದಾರುನ್ನೂರ್ ಎಜುಕೇಶನ್ ಸೆಂಟರ್ ಕಾಶಿಪಟ್ಣ ಮಂಗಳೂರು ವಲಯದ ಮಹಾಸಭೆಯು ದಾರುನ್ನೂರ್ ಕೇಂದ್ರ ಸಮಿತಿಯ ಅಧ್ಯಕ್ಷ ಖಾಝಿ ಅಲ್ಹಾಜ್ ತ್ವಾಖ ಅಹ್ಮದ್ ಮುಸ್ಲಿಯಾರ್‌ರ ಅಧ್ಯಕ್ಷತೆಯಲ್ಲಿ ಜರಗಿತು.
ಸಭೆಯಲ್ಲಿ 2024-27ನೆ ಸಾಲಿನ ನೂತನ ಸಮಿತಿಯನ್ನು ಸರ್ವಾನುಮತದಿಂದ ಆರಿಸಲಾಯಿತು. ಅಧ್ಯಕ್ಷರಾಗಿ ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್, ಕಾರ್ಯಾಧ್ಯಕ್ಷರಾಗಿ ಹಾಜಿ ಮುಹಮ್ಮದ್ ಹನೀಫ್, ಉಪಾಧ್ಯಕ್ಷರಾಗಿ ಹಾಜಿ ಸೈಯದ್ ಶಾಲಿ ತಂಳ್, ಹಾಜಿ ಇಬ್ರಾಹೀಂ ಕೆ.ಸಿ. ರೋಡ್, ಪ್ರಧಾನ ಕಾರ್ಯದರ್ಶಿಯಾಗಿ ಸೈಯದ್ ಶಾಹುಲ್ ಹಮೀದ್ ತಂಳ್, ಕೋಶಾಧಿಕಾರಿಯಾಗಿ ಅದ್ದು ಹಾಜಿ, ಜೊತೆ ಕಾರ್ಯದರ್ಶಿಗಳಾಗಿ ಫೈಝಲ್ ಕುತ್ತಾರ್, ಎಫ್.ಅಬ್ದುಲ್ ಜಲೀಲ್, ಶುಹೈಲ್ ಆಯ್ಕೆಯಾಗಿದ್ದಾರೆ.
ವೈದ್ಯಕೀಯ ಘಟಕದ ಅಧ್ಯಕ್ಷರಾಗಿ ಡಾ. ಮುಹಮ್ಮದ್ ಆರಿಫ್ ಮಸೂದ್, ಮಂಗಳೂರು ವಲಯ ಯೂತ್ ಕನ್ವಿನರಾಗಿ ಮುಹಮ್ಮದ್ ಸವಾದ್, ಸಿ.ಎಂ. ಹನೀಫ್, ಉಳ್ಳಾಲ ವಲಯ ಸಂಘಟನಾ ಕಾರ್ಯದರ್ಶಿಯಾಗಿ ಆಸಿಫ್ ಅಬ್ದುಲ್ಲಾ ಉಳ್ಳಾಲ, ಮಾಧ್ಯಮ ಮತ್ತು ಸುರತ್ಕಲ್ ವಲಯ ಸಂಘಟನಾ ಕಾರ್ಯದರ್ಶಿಯಾಗಿ ಇರ್ಷಾದ್ ಕೆರೆಕಾಡ್, ದಾರುನ್ನೂರ್ ಮಂಗಳೂರು ವಲಯದ ಮ್ಯಾನೇಜರ್ ಆಗಿ ಮುಸ್ತಫ ಅಹ್ಮದ್ ಬಾಷಾ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸದಸ್ಯರಾಗಿ ಹಾಜಿ ಅಬ್ದುಲ್ ಸಮದ್, ಫಕೀರಬ್ಬ ಮಾಸ್ಟರ್, ಹಾಜಿ ಅಬ್ದುಲ್ ರಶೀದ್, ಮುಹಮ್ಮದ್ ಮುಸ್ತಫ ಭಾರತ್, ಮುಹಮ್ಮದ್ ನಬೀಲ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.