ಡಿವೈಎಫ್‌ಐ ವತಿಯಿಂದ ರಕ್ತದಾನ ಶಿಬಿರ
Update: 2024-02-14 20:25 IST
ಮಂಗಳೂರು, ಫೆ.14: ಡಿವೈಎಫ್‌ಐ 12ನೇ ಕರ್ನಾಟಕ ರಾಜ್ಯ ಸಮ್ಮೇಳನದ ಪ್ರಚಾರಾರ್ಥ ಡಿವೈಎಫ್‌ಐ ಉರ್ವಸ್ಟೋರ್ ಘಟಕದ ವತಿಯಿಂದ ಕೊಟ್ಟಾರದಲ್ಲಿರುವ ಕರಾವಳಿ ಲೇಖಕಿಯರ ಭವನದಲ್ಲಿ ರಕ್ತದಾನ ಶಿಬಿರ ನಡೆಯಿತು.
ಡಿವೈಎಫ್‌ಐ ದ.ಕ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಉದ್ಘಾಟಿಸಿದರು.ಡಿವೈಎಫ್‌ಐ ಉರ್ವಸ್ಟೋರ್ ಘಟಕದ ಅಧ್ಯಕ್ಷ ರಾಜೇಶ್ ಕುಲಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕಟ್ಟಡ ಕಾರ್ಮಿಕ ಸಂಘದ ಉರ್ವಸ್ಟೋರ್ ಘಟಕದ ಮುಖಂಡ ಪ್ರಕಾಶ್, ಎಜೆ ಆಸ್ಪತ್ರೆಯ ಬ್ಲಡ್‌ಬ್ಯಾಂಕ್ ಅಧಿಕಾರಿ ಗೋಪಾಲಕೃಷ್ಣ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಡಿವೈಎಫ್‌ಐ ಮುಖಂಡರಾದ ಮನೋಜ್ ಕುಲಾಲ್, ಪ್ರಶಾಂತ್ ಎಂಬಿ, ಸುಧಾಕರ್, ಪುನೀತ್, ಇಕ್ಬಾಲ್, ಪ್ರಶಾಂತ್ ಆಚಾರ್, ಪ್ರದೀಪ್, ಹರ್ಷಿತ್, ರಕ್ಷಿತ್, ಅನಿಲ್ ಪಾಲ್ಗೊಂಡಿದ್ದರು. ಡಿವೈಎಫ್‌ಐ ಉರ್ವಸ್ಟೋರ್ ಘಟಕದ ಕಾರ್ಯದರ್ಶಿ ಸುಕೇಶ್ ಕಾರ್ಯಕ್ರಮ ನಿರೂಪಿಸಿದರು.