×
Ad

ಡಿವೈಎಫ್‌ಐ ರಾಜ್ಯ ಸಮ್ಮೇಳನ ಪ್ರಚಾರಾರ್ಥ: ಬೆಂಗರೆ ಫಲ್ಗುಣಿ ನದಿಯಲ್ಲಿ ನಾಡ ದೋಣಿಗಳ ಮೆರವಣಿಗೆ

Update: 2024-02-15 17:51 IST

ಮಂಗಳೂರು: ಡಿವೈಎಫ್‌ಐ ಕರ್ನಾಟಕ ರಾಜ್ಯ ಸಮ್ಮೇಳನದ ಪ್ರಚಾರಾರ್ಥ ಬೆಂಗರೆಯ ಪಲ್ಗುಣಿ ನದಿಯಲ್ಲಿ ನಾಡ ದೋಣಿಗಳ ಮೆರವಣಿಗೆಯು ಗುರುವಾರ ನಡೆಯಿತು.

ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ದೋಣಿ ಮುನ್ನಡೆಸುವ ಕೈ ದಂಡನ್ನು ಹಸ್ತಾಂತರಿಸಿ ಚಾಲನೆ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ‘ಉದ್ಯೋಗ, ಸಾಮರಸ್ಯ, ಘನತೆಯ ಬದುಕಿಗಾಗಿ’ ಎಂಬ ಘೋಷಣೆಯಡಿ ನಡೆಯುವ ಈ ಸಮ್ಮೇಳನದಲ್ಲಿ ಯುವಜನರು ಎದುರಿಸು ತ್ತಿರುವ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಚರ್ಚಿಸಿ ಮುಂದಿನ ದಿನಗಳಲ್ಲಿ ಪ್ರಬಲ ಚಳುವಳಿಗಳನ್ನು ಮುನ್ನಡೆಸಲಿದೆ. ಬಡವರ ಮನೆಯ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವ, ಯುವಜನರಿಗೆ ಉದ್ಯೋಗಗಳನ್ನು ಸೃಷ್ಟಿಸುವ ಬದಲಾಗಿ ಮತೀಯ ರಾಜಕಾರಣಗಳಲ್ಲಿ ತೊಡಗಿಸಿ ಬಲಿಕೊಡುವ ಹುನ್ನಾರಗಳನ್ನು ವ್ಯವಸ್ಥಿತವಾಗಿ ನಡೆಸುವ ಬಿಜೆಪಿ ಪಕ್ಷದ ಜನವಿರೋಧಿ ನೀತಿಗಳನ್ನು ಬಯಲುಗೊಳಿಸಬೇಕಾಗಿದೆ ಎಂದರು.

ಈ ವೇಳೆ ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ, ಡಿವೈಎಫ್‌ಐ ಜಿಲ್ಲಾ ಮುಖಂಡರಾದ ಮನೋಜ್ ವಾಮಂಜೂರು, ರಝಾಕ್ ಮೊಂಟೆಪದವು, ರಿಝ್ವಾನ್ ಹರೇಕಳ, ಜಗದೀಶ್ ಬಜಾಲ್, ನವೀನ್ ಕೊಂಚಾಡಿ, ರಝಾಕ್ ಮುಡಿಪು, ಧಿರಾಜ್ ಬಜಾಲ್, ಯೋಗಿತಾ ಉಳ್ಳಾಲ ಉಪಸ್ಥಿತರಿದ್ದರು.

ಡಿವೈಎಫ್‌ಐ ಬೆಂಗರೆ ಗ್ರಾಮ ಸಮಿತಿಯ ಮುಖಂಡರಾದ ತಯ್ಯೂಬ್ ಬೆಂಗರೆ, ಹನೀಫ್ ಬೆಂಗರೆ, ನೌಶಾದ್ ಬೆಂಗರೆ, ಪಿಜಿ ರಫೀಕ್, ಜುಬೈರ್, ಮುಹಾಝ್, ತಂಝೀಲ್, ನಾಸಿರ್ ಬಾಸ್, ರಫೀಕ್, ಶಾಹಿಲ್, ಪಲ್ಗುಣಿ ಸಾಂಪ್ರದಾಯಿಕ ದೋಣಿ ಸಂಘದ ಮುಖಂಡರಾದ ಸಾದಿಕ್, ಸರ್ಫ್ರರಾಝ್, ಫಹಾಝ್, ಇಮ್ರಾನ್ ಧರಣಿಯ ನೇತೃತ್ವ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News