×
Ad

ಬ್ಯಾರಿ ‘ಆಶಯ ಗೀತೆ’ ಆಹ್ವಾನ

Update: 2024-02-15 17:53 IST

ಮಂಗಳೂರು, ಫೆ.15: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ರಾಜ್ಯ ಸರಕಾರದಿಂದ ಸ್ಥಾಪನೆಗೊಂಡಿರುವ ಬ್ಯಾರಿ ಅಧ್ಯಯನ ಪೀಠವು ‘ಬ್ಯಾರಿ ಆಶಯ ಗೀತೆ’ಯನ್ನು ಆಹ್ವಾನಿಸಿದೆ.

ಬ್ಯಾರಿ ಜನಾಂಗ, ಭಾಷೆ, ಸಾಹಿತ್ಯ, ಸಂಸ್ಕೃತಿ, ಸಂಶೋಧನೆ ಇವುಗಳ ಅಧ್ಯಯನಕ್ಕಾಗಿ ಸ್ಥಾಪನೆಗೊಂಡ ಬ್ಯಾರಿ ಅಧ್ಯಯನ ಪೀಠದ ಧ್ಯೇಯ ಮತ್ತು ಉದ್ದೇಶಗಳಿಗೆ ಅನುಗುಣವಾಗಿ ಬ್ಯಾರಿ ಹಾಗೂ ಕನ್ನಡ ಭಾಷೆಗಳಲ್ಲಿ ಆಶಯ ಗೀತೆಯೊಂದನ್ನು ರಚಿಸಲು ಉದ್ದೇಶಿಸಿದೆ. ಹಾಗಾಗಿ ಬ್ಯಾರಿ ಬದುಕಿನ ಬಗ್ಗೆ ಆಸಕ್ತಿಯಿರುವ ಬರಹಗಾರರಿಂದ ಸ್ವರಚಿತ ಆಶಯ ಗೀತೆಯೊಂದನ್ನು ಆಹ್ವಾನಿಸಲಾಗಿದೆ.

ಆಸಕ್ತರು ಮಾರ್ಚ್ 7, 2024ರೊಳಗೆ ಗೀತೆಯನ್ನು ಸಂಯೋಜಕರ ಕಚೇರಿ, ಬ್ಯಾರಿ ಅಧ್ಯಯನ ಪೀಠ, ವಿಶ್ವವಿದ್ಯಾನಿಲಯ ಕಾಲೇಜು, ಹಂಪನಕಟ್ಟ, ಮಂಗಳೂರು-575001 ಇಲ್ಲಿಗೆ ತಲುಪಿಸಬಹುದು. ಮಾಹಿತಿಗೆ ಮೊ.ಸಂ: 9448344556ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News