ರಾಜ್ಯ ಮಟ್ಟದ ಮುಸಾಬಖ ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧೆ: ಇಮೇಜ್ ಸ್ಟಿಚ್ಚಿಂಗ್ ನಲ್ಲಿ ಶೆಝ ಪ್ರಥಮ
Update: 2024-02-17 12:45 IST
ಬಂಟ್ವಾಳ, ಫೆ.17: ಸಮಸ್ತ ಕೇರಳ ಜಂ-ಇಯ್ಯತ್ತುಲ್ ಮುಅಲ್ಲಿಮೀನ್ ಸೆಂಟ್ರಲ್ ಕೌನ್ಸಿಲ್ ವತಿಯಿಂದ ಪುತ್ತೂರು - ಪರ್ಲಡ್ಕ ದಲ್ಲಿ ನಡೆದ ಕರ್ನಾಟಕ ರಾಜ್ಯ ಮಟ್ಟದ ಮುಸಾಬಖ ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧೆಯ ಸೀನಿಯರ್ ವಿಭಾಗ ಹೆಣ್ಣು ಮಕ್ಕಳ ಇಮೇಜ್ ಸ್ಟಿಚ್ಚಿಂಗ್ ಸ್ಪರ್ಧೆಯಲ್ಲಿ ಕಲ್ಲಡ್ಕ ಕೆ.ಸಿ.ರೋಡ್ ನೂರುಲ್ ಉಲೂಂ ಮದ್ರಸ ವಿದ್ಯಾರ್ಥಿನಿ ಶೆಝ ಎ. ಪ್ರಶಸ್ತಿ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇವರು ಕಲ್ಲಡ್ಕ ಸಮೀಪದ ಕೆ.ಸಿ.ರೋಡ್ ನಿವಾಸಿ ಅನ್ವರ್ ಸಾದತ್ ಮತ್ತು ಶೆಹನಾಝ್ ದಂಪತಿಯ ಪುತ್ರಿ.