×
Ad

ಮೈಂದಾಲದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

Update: 2024-02-26 16:12 IST

ಬಂಟ್ವಾಳ: ಬದ್ರಿಯಾ ಹೆಲ್ಪ್ ಲೈನ್ ಹಳೆಮನೆ, ಮೈಂದಾಲ ಹಾಗೂ ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜು ಹಾಸ್ಪಿಟಲ್ ಮಂಗಳೂರು, ಇದರ ಸಹಕಾರದಿಂದ ಇಂಡಿಯನ್ ಕ್ಯಾನ್ಸರ್ ಸೊಸೈಟಿ ಇದರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಸಣಾ ಶಿಬಿರವು ಬದ್ರಿಯ ಮಸೀದಿ ಹಿಂಬಾಗದಲ್ಲಿ ರವಿವಾರ ನಡೆಯಿತು.

ಆರೋಗ್ಯ ತಪಸಣಾ ಶಿಬಿರದಲ್ಲಿ ಒಟ್ಟು 150ಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಶಿಬಿರದ ಸದುಪಯೋಗವನ್ನು ಪಡೆದುಕೊಂಡರು.

ಬದ್ರಿಯಾ ಜುಮಾ ಮಸೀದಿ ಖತೀಬರಾದ ಶಾಕೀರ್ ನಿಝಾಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬದ್ರಿಯಾ ಹೆಲ್ಪ್ ಲೈನ್ ಹಳೆಮನೆ ಅಧ್ಯಕ್ಷರಾದ ಉಸ್ಮಾನ್ ವಹಿಸಿದರು. ಬದ್ರಿಯಾ ಜುಮಾ ಮಸೀದಿ ಸದರ್ ಮುಅಲ್ಲಿಮ್ ಅನ್ವಾರ್ ಮುಸ್ಲಿಯಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಡಾ! ಜೀವನ್, ಡಾ.ಮಧುರಿಮಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

BJM ಅಧ್ಯಕ್ಷ ಮುಸ್ತಫಾ ಮೈಂದಾಲ, ರಫೀಕ್, ಯೂಸುಫ್, ಅಬೂಬಕ್ಕರ್, ರಹಿಮಾನ್ ಮುಸ್ಲಿಯಾರ್ ಮೊದಲಾದವರು ಉಪಸ್ಥಿತರಿದ್ದರು.

ಬದ್ರಿಯಾ ಹೆಲ್ಪ್ ಲೈನ್ ಹಳೆಮನೆ ಮೈಂದಾಲ.ಪದಾಧಿಕಾರಿಗಳಾದ ಹಸನಬ್ಬ, ಹೈದರ್, ಅಝ್ಮಾನ್, ಅನ್ಸಾರ್ ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

ತಮೀಮ್ ಮೈಂದಾಲ, ಸ್ವಾಗತಿಸಿದರು. ಅಶ್ರಪ್ ಅರಬಿ ಕಲ್ಲಡ್ಕ ಕಾರ್ಯಕ್ರಮವನ್ನು ನಿರೂಪಿಸಿದರು.








 


 


 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News