×
Ad

ಮುಡಿಪು‌‌ ಜಂಕ್ಷನ್ ನಲ್ಲಿ ರಿಕ್ಷಾ ಚಾಲಕರ ಸೌಹಾರ್ದ ಇಫ್ತಾರ್ ಸಂಗಮ

Update: 2024-03-30 17:31 IST

ಕೊಣಾಜೆ: ಮುಡಿಪು ಜಂಕ್ಷನ್ನಿನಲ್ಲಿ ಶುಕ್ರವಾರ ಸಂಜೆ ರಿಕ್ಷಾ ಚಾಲಕರ ʼಆಟೋ ರಾಜಕನ್ಮಾರ್ ದ.ಕ ಜಿಲ್ಲೆʼ ಆಯೋಜಿಸಿದ ಸೌಹಾರ್ದ ಇಫ್ತಾರ್ ಸಂಗಮದಲ್ಲಿ ಎಲ್ಲಾ ಧರ್ಮದ ನೂರಕ್ಕೂ ಅಧಿಕ ಮಂದಿ ಭಾಗವಹಿಸಿ ಸಹಭೋಜನ ನಡೆಸಿದರು.

ಕರಾವಳಿ ಆಟೋ ರಿಕ್ಷಾ ಪಾರ್ಕಿನ ಪ್ರಸಾದ್ ಕುರ್ನಾಡು ಮಾತನಾಡಿ, ಸೌಹಾರ್ದಯತವಾಗಿ ನಡೆದ ಕಾರ್ಯಕ್ರಮದಲ್ಲಿ ಎಲ್ಲಾ ಧರ್ಮೀಯರು ಭಾಗವಹಿಸಿದ್ದಾರೆ. ರಿಕ್ಷಾ ಚಾಲಕರ ಒಗ್ಗಟ್ಟಿಗೆ ಆಟೋರಾಜಕನ್ಮಾರ್ ಬಲ ನೀಡಿದೆ. ಮುಡಿಪುವಿನಲ್ಲಿ ಎಲ್ಲಾ ಧರ್ಮೀಯರು ಸೇರಿಕೊಂಡು ಆಚರಿಸಿದ ದೊಡ್ಡ ಕಾರ್ಯಕ್ರಮ ಇದಾಗಿದೆ ಎಂದರು.

ನ್ಯಾಯವಾದಿ ಅಸ್ಗರ್ ಮುಡಿಪು,‌ ಆಟೋರಾಜಾಕನ್ಮಾರ್ ಯೂನಿಯನ್ ಅಧ್ಯಕ್ಷ ಸಿದ್ದೀಕ್ ಮುಡಿಪು, ಎಐಯುಟಿಸಿ ಅಧ್ಯಕ್ಷ ಮುಸ್ತಾಫ ಕಡಂಬಾರ್ , ಕುರ್ನಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸೂಫಿಕುಂಞಿ, ತಾ.ಪಂ ಮಾಜಿ ಸದಸ್ಯ ಹೈದರ್ ಕೈರಂಗಳ ನ್ಯಾಯವಾದಿ ಅಸ್ಗರ್ ಸಂಬಾರತೋಟ, ಕರಾವಳಿ ಆಟೋ ಪಾರ್ಕ್ ಮುಡಿಪು ಇದರ ಅಧ್ಯಕ್ಷ ಪ್ರಸಾದ್ ಕುರ್ನಾಡು, ಪದಾಧಿಕಾರಿಗಳಾದ ಕಿರಣ್, ಸತೀಶ್, ಯೂಸುಫ್, ಸಂಕೇತ್, ಸುರೇಶ, ಚರಣ್ ಆಟೋ ರಾಜಾಕನ್ಮಾರ್‌ ಗೌರಾವಧ್ಯಕ್ಷ ಉಸ್ಮಾನ್ ಮೊಂಟೆಪದವು, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್, ಪದಾಧಿಕಾರಿಗಳಾದ ಮನ್ಸೂರ್, ಇಕ್ಬಾಲ್ ಬೀರಿ, ರಝಾಕ್ ಕೆ.ಸಿ.ರೋಡ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News