×
Ad

ಉಳ್ಳಾಲ ಉರೂಸ್ ಪ್ರಯುಕ್ತ ಮೊಹಲ್ಲಾಗಳ ಉಲಮಾ ಸಮಾವೇಶ

Update: 2025-01-12 20:09 IST

ಉಳ್ಳಾಲ: ಎಪ್ರಿಲ್ 24 ರಿಂದ ಮೇ 18ರ ತನಕ ನಡೆಯಲಿರುವ ಉಳ್ಳಾಲ ಉರೂಸ್ ಪ್ರಯುಕ್ತ ಉಳ್ಳಾಲ ಜಮಾಅತ್ ಅಧೀನದ 28ಮೊಹಲ್ಲಾ ಮಸೀದಿಯ ಖತೀಬ್, ಇಮಾಮ್, ಮುಅಝಿನ್ ಮತ್ತು ಸದರ್ ಮುಅಲ್ಲಿಮರ ಮೊಹಲ್ಲಾಗಳ ಉಲಮಾ ಸಮಾವೇಶ ಉಳ್ಳಾಲ ದರ್ಗಾ ವಠಾರದ ಮದನಿ ಹಾಲಿನಲ್ಲಿ ನಡೆಯಿತು.

ದರ್ಗಾ ಅಧ್ಯಕ್ಷ ಬಿ.ಜಿ ಹನೀಫ್ ಹಾಜಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ದರ್ಗಾ ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್ವೇ, ಕೋಶಾಧಿಕಾರಿ ನಾಝಿಮ್ ರಹ್ಮಾನ್, ಜತೆ ಕಾರ್ಯದರ್ಶಿಗಳಾದ ಇಸಾಕ್ ಮೇಲಂಗಡಿ, ಮುಸ್ತಫಾ ಮದನಿ ನಗರ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News