×
Ad

ಮಂಗಳೂರು: ಭೂ ದಾಖಲೆಗಳ ಇ ಖಜಾನೆ ಡಿಜಿಟಲೀಕರಣಕ್ಕೆ ಚಾಲನೆ

Update: 2025-01-17 20:31 IST

ಮಂಗಳೂರು: ಮಂಗಳೂರಿನ ತಾಲೂಕು ಕಚೇರಿಯಲ್ಲಿ ಭೂ ಸುರಕ್ಷಾ ಯೋಜನೆಯಡಿ ಭೂ ದಾಖಲೆಗಳ ಇ ಖಜಾನೆ ಡಿಜಿಟಲೀಕರಣ ಕಾರ್ಯಕ್ರಮಕ್ಕೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶುಕ್ರವಾರ ಚಾಲನೆ ನೀಡಿದರು.

ಸಾರ್ವಜನಿಕರ ಭೂ ದಾಖಲೆಗಳಿಗೆ ಭದ್ರತೆ ಒದಗಿಸಲು ಸರ್ವೆ ಮತ್ತು ಭೂ ನೋಂದಣಿ ದಾಖಲೆಗಳ ಡಿಜಿಟಲೀಕರಣ ಕೈಗೊಳ್ಳಲಾಗಿದೆ. ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಒಂದು ತಾಲೂಕಿನಲ್ಲಿ ಯೋಜನೆ ಜಾರಿಗೊಳಿಸಲಾಗಿದೆ. ದ.ಕ.ಜಿಲ್ಲೆಯಲ್ಲಿ ಮಂಗಳೂರು ತಾಲೂಕಿನಲ್ಲಿ ಪ್ರಾಯೋಗಿಕವಾಗಿ ಯೋಜನೆ ಜಾರಿಯಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳು ಸೇರಿದಂತೆ ರಾಜ್ಯಾದ್ಯಂತ ಯೋಜನೆ ವಿಸ್ತರಣೆಯಾಗಲಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News