×
Ad

ಗುರುವಾಯನಕೆರೆ: ಬೃಹತ್‌ ರಕ್ತದಾನ ಶಿಬಿರ

Update: 2025-01-17 22:39 IST

ಬೆಳ್ತಂಗಡಿ: ಕೇಂದ್ರ ಜುಮ್ಮಾ ಮಸ್ಜಿದ್ -ಗುರುವಾಯನಕೆರೆ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಜಿ.ಕೆರೆ ಬ್ರಾಂಚ್ ಸಮಿತಿ, ತಾಜುಲ್ ಹುದಾ ಯಂಗ್ ಮೆನ್ಸ್ ಕೊಂಟು ಪಲ್ಕೆ, ಬ್ಲಡ್ ಡೊನರ್ಸ್ ಮಂಗಳೂರು(ರಿ), ಹೈದರ್ ನಿರ್ಸಾಲ್ ಬ್ಲಡ್ ಡೋನರ್ಸ್ ಪೋರಮ್ ಬೆಳ್ತಂಗಡಿ ಹಾಗೂ ಬ್ಲಡ್ ಬ್ಯಾಂಕ್ ವೆನ್ಲಾಕ್ ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಗುರುವಾಯನಕೆರೆ ಶಾದಿ ಮಹಲ್ ನಲ್ಲಿ ಬೃಹತ್‌ ರಕ್ತದಾನ ಶಿಬಿರ ಶುಕ್ರವಾರ ನಡೆಯಿತು.

ರಕ್ತದಾನ ಶಿಬಿರ ಉದ್ಘಾಟಿಸಿ ಗುರುವಾಯನಕೆರೆ ಜುಮ್ಮಾ ಮಸೀದಿ ಅಧ್ಯಕ್ಷರಾದ ಹಾಜಿ ಅಬ್ದುಲ್ ಲತೀಫ್ ಮಾತನಾಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಸೀದಿ ಖತೀಬರಾದ ಎ.ಕೆ ರಝಾ ಅಮ್ಮದಿ, ಬ್ಲಡ್ ಬ್ಯಾಂಕ್ ಅಧಿಕಾರಿ ಆಂಟೋನಿ, SDPI ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರ್, ಕಾರ್ಯದರ್ಶಿ ಅಶ್ರಫ್ ತಲಪಾಡಿ, ಬೆಳ್ತಂಗಡಿ ಕ್ಷೇತ್ರಾಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಕುವೆಟ್ಟು ಗ್ರಾಮ ಪಂಚಾಯತ್ ಪಂ. ಅಭಿವೃದ್ಧಿ ಅಧಿಕಾರಿ ಇಮ್ಮಿಯಾಝ್, ಮನ್ ಶಾರ್ ಅಕಾಡೆಮಿ ಗೇರುಕಟ್ಟೆ ಪ್ರಾಂಶುಪಾಲರಾದ ಹೈದರ್ ಮರ್ಧಾಳ, CRP ರಾಜೇಶ್, ಹಸೈನಾರ್ ಶಾಫಿ, ಅಬ್ದುಲ್ ರಹಮಾನ್ ಹಾಜಿ, ನಿಝರ್ ಕೆ.ಪಿ, ಅಬ್ದುಲ್ ಹಕೀಮ್ ಸುನ್ನತ್ ಕೆರೆ, ಯಾಕೂಬ್ ಮುಸ್ಲಿಯಾರ್, ಉಮರ್ ಮಟನ್, ಕಲಂದರ್ ಬಿ ಎಚ್, ಕುವೆಟ್ಟು ಪಂಚಾಯತ್ ಸದಸ್ಯರಾದ ಮುಸ್ತಾಫ ಜಿ. ಕೆರೆ, ರಿಯಾಝ್, ಸಯ್ಯದ್, ದಾವೂದ್ ಜಿ.ಕೆ ಆಗಮಿಸಿದ್ದರು.

ರಕ್ತದಾನ ಶಿಬಿರದಲ್ಲಿ ದಾನಿಗಳಿಂದ ಒಟ್ಟು 73 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News