×
Ad

ಹಸವಿನ ಹಾಲು ಕರೆಯುವ ಸ್ಪರ್ಧೆಗೆ ಆಹ್ವಾನ

Update: 2025-01-22 19:12 IST

ಮಂಗಳೂರು: ಪ್ರಸಕ್ತ (2024-25ನೇ) ಸಾಲಿನಲ್ಲಿ ಮಂಗಳೂರು ತಾಲೂಕು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಜಂಟಿ ಆಶ್ರಯದಲ್ಲಿ ನಡೆಯುವ ಹಸುವಿನ ಹಾಲು ಕರೆಯುವ ಸ್ಪರ್ಧೆಗೆ ಅರ್ಜಿ ಆಹ್ವಾನಿಸಲಾಗಿದೆ.

ತಾಲೂಕಿನ ಆಸಕ್ತ ರೈತರು (ಅತೀ ಹೆಚ್ಚು ಹಾಲು ಹಿಂಡುವ-ಪ್ರತಿ ದಿನಕ್ಕೆ 15 ಲೀ ಹಾಲು ಮತ್ತು ಮೇಲ್ಪಟ್ಟ ಹಸು) ಜ.26ರೊಳಗೆ ಹೆಸರು ನೋಂದಾಯಿಸಬಹುದು. ಇಲಾಖೆಯಿಂದ ನಿಯೋಜಿಸಿದ ಆಯ್ಕೆ ಸಮಿತಿಯ ಮುಂದೆ ಹಸುವಿನ ಹಾಲನ್ನು ಕರೆದು, ಅಳತೆ ಮಾಡಿಸಲು ಒಪ್ಪಿಗೆ ನೀಡಬೇಕು. ಸ್ಪರ್ಧೆಯಲ್ಲಿ ಬಹುಮಾನ ಪಡೆದ ಬಳಿಕ ಕಾರ್ಯಕ್ರಮಕ್ಕೆ ಹಸುವನ್ನು ಸ್ವತಃ ಕರೆದುಕೊಂಡು ಬರಲು ಒಪ್ಪಿಗೆ ನೀಡುವಂತೆ ಸೂಚಿಸಲಾಗಿದೆ.

ನೋಂದಣಿ ಹಾಗೂ ಮಾಹಿತಿಗೆ ಡಾ.ವೆಂಕಟೇಶ್ ಎಸ್.ಎಂ. (ದೂ.ಸಂ: 9632550628), ಡಾ. ಅಶೋಕ್ ಕೆ.ಆರ್. (ದೂ.ಸಂ: 9243306956), ಡಾ.ರೇಖಾ ಎಂಟಿ. (ದೂ.ಸಂ 9243306957) ಸಂಪರ್ಕಿಸಬಹುದು ಎಂದು ಮಂಗಳೂರು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಮುಖ್ಯ ಪಶು ವೈದ್ಯಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News