ಕಿನ್ಯ: ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ
Update: 2025-01-27 23:01 IST
ಉಳ್ಳಾಲ: ಧಾರ್ಮಿಕ ಹಾಗೂ ಲೌಕಿಕ ವಿದ್ಯಾಭ್ಯಾಸ ಜೊತೆ ಪ್ರವಾದಿ ಯವರ ತತ್ವ ಸಿದ್ಧಾಂತಗಳನ್ನು ಪಾಲಿಸಿಕೊಂಡು ಹೊಗಬೇಕಾದ್ದು ನಮ್ಮ ಜವಾಬ್ದಾರಿ ಆಗಿದೆ ಎಂದು ಸಯ್ಯಿದ್ ಶಿಹಾಬ್ ತಂಙಳ್ ಅಲ್ ಹುಮೈದಿ ಕಿನ್ಯ ಹೇಳಿದರು.
ಅವರು ಕಿನ್ಯ ಕೇಂದ್ರ ಜುಮ್ಮಾ ಮಸೀದಿ ಇದರ ಆಶ್ರಯದಲ್ಲಿ ನಡೆಯುವ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಅನಸ್ ಸಿದ್ದೀಕ್ ಅಲ್ ಕಾಮಿಲ್ ಶಿರಿಯ ಧಾರ್ಮಿಕ ಉಪನ್ಯಾಸ ನೀಡಿದರು. ಸಯ್ಯಿದ್ ಅಮೀರ್ ತಂಙಳ್ ಕಿನ್ಯ ದುಆ ನೆರವೇರಿಸಿದರು.
ಕಿನ್ಯ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಕೆ.ಎಸ್.ಇಸ್ಮಾಯಿಲ್ ಹಾಜಿ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.
ಹಮೀದ್ ಕಿನ್ಯ , ಕೇಂದ್ರ ಜುಮ್ಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್, ಫಾರೂಕ್ ದಾರಿಮಿ,ಉಪಾಧ್ಯಕ್ಷ ಇಬ್ರಾಹಿಂ, ಅಶ್ರಫ್ ಮಾರಾಠಿಮೂಲೆ, ಜೊತೆ ಕಾರ್ಯದರ್ಶಿ ಇಸ್ಮಾಯಿಲ್ ಮತ್ತಿತರರು ಉಪಸ್ಥಿತರಿದ್ದರು