×
Ad

ಬಜ್ಪೆ: ಹೆದ್ದಾರಿ ಬದಿಯಲ್ಲಿ ಸ್ವಚ್ಛತಾ ಅಭಿಯಾನ

Update: 2025-02-02 20:51 IST

ಬಜ್ಪೆ: ಇಲ್ಲಿನ ಪಡುಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಜ್ಪೆ-ಗುರುಪುರ ಕೈಕಂಬ ರಾಜ್ಯ ಹೆದ್ದಾರಿಯ ಪುಚ್ಚಳ, ಅಡ್ಕಬಾರೆ, ಪೆರಾರ ಮತ್ತಿತರ ಕಡೆಯಲ್ಲಿ ಪಂಚಾಯತ್ ಅಧ್ಯಕ್ಷೆ, ಉಪಾಧ್ಯಕ್ಷ ಹಾಗೂ ಪಿಡಿಒ ನೇತೃತ್ವದ ಸ್ವಯಂ-ಸೇವಕರು ರವಿವಾರ ಹೆದ್ದಾರಿ ಬದಿಯಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ ನಡೆಸಿದರು.

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಪಿಡಿಒ ಉಗ್ಗಪ್ಪ ಮೂಲ್ಯ ಅವರು, ತ್ಯಾಜ್ಯ ಎಸೆಯುವವರ ವಿರುದ್ಧ ಗ್ರಾಮ ಪಂಚಾಯತ್‌ ಕ್ರಮಗಳನ್ನು ಜರುಗಿಸುತ್ತಿದ್ದರೂ ಕಸ ಎಸೆಯುವುದು ಮಾಡಲಾಗುತ್ತಿದೆ. ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯು ವವರ ವಿರುದ್ಧ ಒಂದು ಸಾವಿರದಿಂದ 5,000 ರೂ. ವರೆಗೆ ದಂಡ ವಿಧಿಸಲಾಗುತ್ತಿದೆ. ಈ ಬಾರಿ ತ್ಯಾಜ್ಯ ತೆರವು ಕಾರ್ಯಾ ಚರಣೆ ವೇಳೆ ತ್ಯಾಜ್ಯ ರಾಶಿಯಲ್ಲಿ ಲಭಿಸಿರುವ ಕೆಲವು ಅಧಿಕೃತ ಕಾಗದಪತ್ರ ಆಧರಿಸಿ, ತಪ್ಪಿತಸ್ಥರ ವಿರುದ್ಧ ದಂಡ ಹೇರಲಾಗುವುದು ಎಂದು ತಿಳಿಸಿದರು.

ಸ್ವಚ್ಛತಾ ಅಭಿಯಾನದಲ್ಲಿ ಪಿಡಿಒ ಉಗ್ಗಪ್ಪ ಮೂಲ್ಯ, ಅಧ್ಯಕ್ಷೆ ಮೀನಾಕ್ಷಿ, ಉಪಾಧ್ಯಕ್ಷ ಜಯಂತ ಪೂಜಾರಿ, ಸದಸ್ಯರಾದ ಅಮಿತಾ ಶೆಟ್ಟಿ, ಯಶವಂತ ಪೂಜಾರಿ, ಪೆರಾರ ಫ್ರೆಂಡ್ಸ್ ಕ್ಲಬ್ ಸದಸ್ಯರು, ಬಿಲ್ ಕಲೆಕ್ಟರ್ ಭೋಜ ನಾಯ್ಕ್, ಗ್ರಂಥಾಲಯ ಮೇಲ್ವಿಚಾರಕ ಭರತ್ ಕುಮಾರ್ ವಿ, ಪಡುಪೆರಾರ ಪಂಚಾಯತ್ ಸ್ವಚ್ಚತಾ ವಾಹಿನಿಯ ಸಿಬ್ಬಂದಿ, ಪಂಚಾಯತ್‍ನ ಸಂಜೀವಿನಿ ಒಕ್ಕೂಟದ ಪ್ರಜ್ಞಾ ಮತ್ತು ಬಳಗದವರು, ಸ್ಥಳೀಯ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.





Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News