×
Ad

ಕುಂಜತ್ತಬೈಲ್: ಮಹಿಳಾ ಕಾಂಗ್ರೆಸ್ ಕಾರ್ಯಕರ್ತರ ಸಭೆ

Update: 2025-02-16 21:14 IST

ಕಾವೂರು: ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ವ್ಯಾಪ್ತಿಯ ಕುಂಜತ್ತಬೈಲ್ ವಾರ್ಡ್ ಸಂಖ್ಯೆ 13ರ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ರವಿವಾರ ಕುಂಜತ್ತಬೈಲ್ ಹೌಸಿಂಗ್ ಬೋರ್ಡ್ ನಲ್ಲಿರುವ 'ಆಸರೆ' ಮನೆಯಲ್ಲಿ ನಡೆಯಿತು.

ಸಭೆಯಲ್ಲಿ ಕೆ.ಪಿ.ಸಿ‌.ಸಿ ಸದಸ್ಯರು ಬ್ಲಾಕ್ ಮಾಜಿ ಅಧ್ಯಕ್ಷರಾದ ಸದಾಶಿವ ಶೆಟ್ಟಿ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಕುಂತಳಾ ಕಾಮತ್, ಬ್ಲಾಕ್ ಪ್ರಧಾನ ಕಾರ್ಯದರ್ಶಿ ರೆಹಮಾನ್ ಖಾನ್ ಕುಂಜತ್ತಬೈಲ್, ಪಕ್ಷ ಸಂಘಟನೆಯ ಕುರಿತು‌ ಸಲಹೆ ಸೂಚನೆ ಗಳನ್ನು‌ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ವಾರ್ಡ್ ಅಧ್ಯಕ್ಷ ಹುಸೈನ್ ರಿಯಾಝ್ ವಹಿಸಿದ್ದರು. ವಾರ್ಡ್ ಮಾಜಿ ಅಧ್ಯಕ್ಷ ಇಬ್ರಾಹಿಂ ಅತ್ರಬೈಲ್, ಬ್ಲಾಕ್ ಮಹಿಳಾ ಕಾಂಗ್ರೆಸ್ ನ ಅನಿತಾ, ವಾರ್ಡ್ ಪದಾಧಿಕಾರಿಗಳು, ಮಹಿಳಾ ಕಾಂಗ್ರೆಸ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು

ವಾರ್ಡ್ ನ‌ ಅಮೃತಾ ಸ್ವಾಗತಿಸಿದರು, ಝಬೇರ್ ಖಾನ್ ಕುಡ್ಲ ವಂದಿಸಿದರು, ದೀಕ್ಷಿತಾ ಕಾರ್ಯಕ್ರಮ ‌ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News