×
Ad

ಸುಳ್ಯ: ಪಯಸ್ವಿನಿ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

Update: 2025-02-16 21:20 IST

ಸುಳ್ಯ: ಪಯಸ್ವಿನಿ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಯುವಕನ ಶವ ಅಂಗಡಿಮಠ ಗೋಳಿಮೂಲೆ ಎಂಬಲ್ಲಿ ರವಿವಾರ ಪತ್ತೆಯಾಗಿದೆ.

ಪಿರಿಯಾಪಟ್ಟಣದ ಅಜಿತ್ (24) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದ್ದು, ಈತ ಸುಳ್ಯದ ಹೋಟೇಲ್‍ನಲ್ಲಿ ಕೆಲಸ ಮಾಡುತ್ತಿದ್ದ. ಕೆಲ ತಿಂಗಳ ಹಿಂದೆ ಊರಿಗೆ ಹೋಗಿದ್ದ ಆತ ವಾಪಸು ಕೆಲಸಕ್ಕೆ ಬಂದಿರಲಿಲ್ಲ. ರವಿವಾರ ಪಯಸ್ವಿನಿ ನದಿ ಹರಿಯುವ ಅಂಗಡಿಮಠ ಗೋಳಿಮೂಲೆ ಎಂಬಲ್ಲಿ ಸ್ಥಳೀಯರಾದ ಪುಷ್ಪಲತಾ ಎಂಬವರಿಗೆ ಕೊಳೆತ ಶವ ಕಂಡುಬಂದಿದೆ. ವಿಷಯ ತಿಳಿದು ಸುಳ್ಯ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಜೇಬಿನಲ್ಲಿ ಇದ್ದ ದಾಖಲೆಯಲ್ಲಿ ಅಜಿತ್ ಪಿರಿಯಾಪಟ್ಟಣ ಎಂದು ತಿಳಿದುಬಂದಿದೆ. ಸುಳ್ಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News