×
Ad

ಇಂಡಿಯಾ ಪೆಡಲ್ ಫೆಸ್ಟಿವ್‌ಗೆ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ

Update: 2025-02-22 20:18 IST

ಮಂಗಳೂರು: ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಮತ್ತು ಇನ್‌ಕ್ರೆಡಿಬಲ್ ಇಂಡಿಯಾ ವತಿಯಿಂದ ಆಯೋಜಿಸಲಾಗುವ 2ನೆ ಆವೃತ್ತಿಯ ಅಂತಾರಾಷ್ಟ್ರೀಯ ಸ್ಟಾಂಡ್ ಅಪ್ ಪೆಡಲ್ (ಎಸ್‌ಯುಪಿ) ಸರ್ಫಿಂಗ್ ಕಾರ್ಯಕ್ರಮಕ್ಕೆ ರಾಜ್ಯದ ಮಾಹಿತಿ, ಜೈವಿಕ ತಂತ್ರಜ್ಞಾನ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಶನಿವಾರ ಅಧಿಕೃತ ಚಾಲನೆ ನೀಡಿದರು.

ಅವರು ಮಾತನಾಡಿ, ಕರ್ನಾಟಕದಲ್ಲಿ ಕರಾವಳಿ ಕ್ರೀಡೆಗಳು ಅದರಲ್ಲೂ ವಿಶೇಷವಾಗಿ ಸರ್ಫಿಂಗ್ ಮತ್ತು ಸ್ಟ್ಯಾಂಡ್ ಅಪ್ ಪೆಡಲ್ ಬೋರ್ಡ್‌ನ ಕ್ಷಿಪ್ರ ಬೆಳವಣಿಗೆ ಕಂಡು ಸಂತಸವಾಗುತ್ತಿದೆ. ಈ ಪ್ರದೇಶವು ಪೆಡಲ್ ಮತ್ತು ಸರ್ಫಿಂಗ್ ಕ್ರೀಡೆಗಳ ಕೇಂದ್ರವಾಗಿರುವುದು ಹೆಮ್ಮೆಯ ವಿಚಾರ. ಸಾಹಸ ಪ್ರವಾಸೋದ್ಯಮ ಮತ್ತು ಸ್ಥಳೀಯ ಕ್ರೀಡಾ ಪ್ರತಿಭೆಗಳನ್ನು ಉತ್ತೇಜಿಸುವ ಪ್ರಯತ್ನಗಳಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದರು.

ಭಾರತದ ಏಕೈಕ ಅಂತಾರಾಷ್ಟ್ರೀಯ ಎಸ್‌ಯುಪಿ ಕಾರ್ಯಕ್ರಮ ಇದಾಗಿದ್ದು, ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಉತ್ಸವದ ಅಧಿಕೃತ ವೀಡಿಯೋ ಕ್ರಿಯೇಟಿವ್ಸ್‌ಗಳನ್ನು ಅನಾವರಣಗೊಳಿಸಲಾಯಿತು.

ಮೊದಲ ಆವೃತ್ತಿಯ ಯಶಸ್ಸಿನ ಬಗ್ಗೆ ಬೆಳಕು ಚೆಲ್ಲುವ ಹಾಗೂ ಎರಡನೆ ಆವೃತ್ತಿ ಕುರಿತಾದ ವೀಡಿಯೋವನ್ನು ಈ ವೇಳೆ ಪ್ರದರ್ಶಿಸಲಾಯಿತು.

2024ರಲ್ಲಿ ಯಶಸ್ಸು ಕಂಡ ಇಂಡಿಯಾ ಪೆಡಲ್ ಫೆಸ್ಟಿವಲ್ ಮಾ. ೭ರಿಂದ ೯ರವರೆಗೆ ಮಂಗಳೂರಿನ ಸಸಿಹಿತ್ಲುಬೀಚ್‌ನಲ್ಲಿ ನಡೆಯಲಿದೆ. ಸರ್ಫಿಂಗ್ ಸ್ವಾಮಿ ಫೌಂಡೇಶನ್ ಆಯೋಜಿಸುವ ಕಾರ್ಯಕ್ರಮದಲ್ಲಿ ಅಸೋಸಿಯೇಶನ್ ಆಫ್ ಪೆಡಲ್ ಸರ್ಫ್ ಪ್ರೊಫೆಶನಲ್ಸ್, ವರ್ಲ್ಡ್ ಟೂರ್ ಟಾಪ್ ಅಂತಾರಾಷ್ಟ್ರೀಯ ಪೆಡ್ಲರ್‌ಗಳು ಹಾಗೂ ಭಾರತದ ಯುವ ಪ್ರತಿಭೆಗಳು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲಿದ್ದಾರೆ.

ಹೆಚ್ಚಿನ ವಿವರಗಳಿಗಾಗಿ ಭೇಟಿ ನೀಡಬಹುದು. https://indiapaddlefestival.com/ipf2025-registration/> ಭೇಟಿ ನೀಡಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News