×
Ad

ಸಂತೋಷ್ ನಾಯಕ್‌ ಬೋಳಿಯಾರು ಹೃದಯಾಘಾತದಿಂದ ನಿಧನ

Update: 2025-02-23 17:06 IST

ಕೊಣಾಜೆ: ಉಳ್ಳಾಲ ತಾಲೂಕು ಬೋಳಿಯಾರಿನ ಉದ್ಯಮಿ, ಶ್ರೀ ಬಪ್ಪನಾಡು ಯಕ್ಷಗಾನ ಮೇಳದ ಕ್ಯಾಂಪ್ ಮ್ಯಾನೇಜರ್‌ ಸಂತೋಷ್‌ ನಾಯಕ್‌ ಬೋಳಿಯಾರು (42) ಹೃದಯಾಘಾತದಿಂದ ಶನಿವಾರ ಸಂಜೆ ನಿಧನರಾದರು.

ಸಂಜೆ ಬೋಳಿಯಾರಿನ ತನ್ನ ಮನೆಯಲ್ಲಿ ಅಲ್ಪ ಅಸೌಖ್ಯದಿಂದ ಕುಸಿದ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಿಸದೆ ಸಾವು ಸಂಭವಿಸಿತು. ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಬಡ ಕುಟುಂಬದಿಂದ ಬಂದ ಸಂತೋಷ್ ನಾಯಕ್‌, ಪ್ರಾಥಮಿಕ ವಿದ್ಯಾಭ್ಯಾಸದ ಬಳಿಕ ರಂಗಸಜ್ಜಿಕೆ, ಮೇಕಪ್‌ ಮತ್ತಿತರ ಸಣ್ಣ ಪುಟ್ಟ ಕೆಲಸಗಳಲ್ಲಿ ತೊಡಗಿಸಿಕೊಂಡು, ಸ್ವಪರಿಶ್ರಮದಿಂದ ಉದ್ಯಮಿಯಾಗಿ ರೂಪುಗೊಂಡರು. ಕಂಪ್ಯೂಟರ್ ಕಲಿತು 2009ರಿಂದ ಬೋಳಿಯಾರಿನಲ್ಲಿ ಫ್ಲಕ್ಸ್‌ ಉದ್ಯಮ ಆರಂಭಿಸಿ ಯಶಸ್ವಿಯಾದರು. ಹಲವುಮಂದಿಗೆ ಉದ್ಯೋಗದಾತರಾ ಗಿದ್ದರು. ಯಕ್ಷಗಾನದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದು, 2015ರಿಂದ ಬಪ್ಪನಾಡು ಮೇಳದ ಕ್ಯಾಂಪ್ ಮ್ಯಾನೇಜರ್‌ ಆಗಿದ್ದರು. ಸ್ಥಳೀಯ ಸಂಘ ಸಂಸ್ಥೆಗಳಿಗೆ ನೆರವಾಗುತ್ತಾ ಜಾತಿ, ಮತ ಭೇದವಿಲ್ಲದೆ ಜನಾನುರಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News