×
Ad

ಮಂಗಳೂರು: ತೇಜಸ್ವಿನಿ ಆಸ್ಪತ್ರೆಯ ವಿರುದ್ಧ ಡಿವೈಎಫ್‌ಐ ಪ್ರತಿಭಟನೆ

Update: 2025-02-28 20:19 IST

ಮಂಗಳೂರು, ಫೆ.28: ಪಂಜಿಮೊಗರುವಿನ ಹಾಮದ್‌ರ ಸಾವಿಗೆ ನಗರದ ತೇಜಸ್ವಿನಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಮತ್ತು ಈ ಸಾವಿನ ಪ್ರಕರಣಕ್ಕೆ ನ್ಯಾಯ ಒದಗಿಸಬೇಕು ಹಾಗೂ ಸಂತ್ರಸ್ತ ಕುಟುಂಬಕ್ಕೆ ಗರಿಷ್ಠ ಪ್ರಮಾಣದ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಡಿವೈಎಫ್‌ಐ ಪಂಜಿಮೊಗರು ಘಟಕದ ನೇತೃತ್ವದಲ್ಲಿ ಶುಕ್ರವಾರ ನಗರದ ಮಿನಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಯಿತು.

ಡಿವೈಎಫ್‌ಐ ದ.ಕ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ, ಶ್ರೀನಾಥ್ ಕಾಟಿಪಳ್ಳ ಮಾತನಾಡಿದರು. ಮಂಗಳೂರು ತಾಲೂಕು ಆರೋಗ್ಯಾಧಿಕಾರಿ ಡಾ.ಸುಜಯ್ ಪ್ರತಿಭಟನಾ ಸ್ಥಳಕ್ಕಾಗಮಿಸಿ ಮನವಿಯನ್ನು ಸ್ವೀಕರಿಸಿದರು.

ಪ್ರತಿಭಟನೆಯಲ್ಲಿ ಡಿವೈಎಫ್‌ಐ ಮುಖಂಡರಾದ ಜಗದೀಶ್ ಬಜಾಲ್, ರಿಝ್ವಾನ್ ಹರೇಕಳ, ನ್ಯಾಯವಾದಿ ಚರಣ್ ಶೆಟ್ಟಿ, ಪ್ರಮೀಳಾ, ಮೃತ ಹಾಮದ್‌ರ ಪುತ್ರ ಹನೀಫ್, ಕಲಂದರ್, ನೌಶಾದ್, ಬಶೀರ್, ಅಝರ್, ಹನುಮಂತ, ಖಲೀಲ್, ಅಸುಂತಾ ಡಿಸೋಜ, ಸೋಮೇಶ, ನವೀನ್ ಡಿಸೋಜ, ಖಾದರ್, ಮುಸ್ತಫ , ಹಕೀಂ ಮಾಹಿಲಾ, ಅಬೂಬಕರ್, ಶರೀಫ್, ಸಿದ್ದೀಕ್, ಅನೀಸ್, ಹಮೀದ್, ಶೇರು ಬಾನು, ತ್ರಿಶಾ, ಸೋಮನಾಥ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News