×
Ad

ಯುವಕ ನಾಪತ್ತೆ

Update: 2025-02-28 22:39 IST

ಮಂಗಳೂರು, ಫೆ.28:ಮೂಡುಪೆರಾರು ಗ್ರಾಮದ ಅರ್ಕೆ ಪದವು ನಿವಾಸಿ, ನಗರದ ಮಂಗಳ ಕಾಲೇಜು ಪ್ಯಾರಾ ಮೆಡಿಕಲ್ ಸೈನ್ಸ್‌ನಲ್ಲ್ ವ್ಯಾಸಂಗ ಮಾಡುತ್ತಿದ್ದ ನಿತೇಶ್ ಬೆಲ್ಚಡ (19) ಎಂಬಾತ ಫೆ. 13ರಿಂದ ಕಾಣೆಯಾಗಿದ್ದಾರೆ.

5.5 ಅಡಿ ಎತ್ತರದ, ಗೋಧಿ ಮೈಬಣ್ಣದ, ಸಾಧಾರಣ ಶರೀರದ ಈತ ಕಾಲೇಜಿನಿಂದ ಮನೆಗೆ ಬಂದು ಯಾರಿಗೂ ಹೇಳದೆ ಹೊರಗೆ ಹೋದವರು ಮರಳಿ ಬಂದಿಲ್ಲ ಎನ್ನಲಾಗಿದೆ. ಕಾಣೆಯಾದ ದಿನ ಕೆಂಪು ಬಣ್ಣದ ಟೀಶರ್ಟ್, ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದರು.

ಕನ್ನಡ, ತುಳು, ಇಂಗ್ಲಿಷ್ ಮಾತನಾಡುವ ಇವರು ಕಂಡು ಬಂದಲ್ಲಿ ಬಜ್ಪೆ ಪೊಲೀಸ್ ಠಾಣೆಯನ್ನು (ದೂ.ಸಂ: 0824-2220531) ಸಂಪರ್ಕಿಸಬಹುದು ಎಂದು ಠಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News