×
Ad

ಬಂಟ್ಸ್ ಸಾಧಕ ಪ್ರಶಸ್ತಿ ಪ್ರದಾನ

Update: 2025-03-06 20:20 IST

ಮಂಗಳೂರು, ಮಾ.6: ಭಾರತೀಯ ಬಂಟ್ಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟಿ ಆಯೋಜಿಸಿದ್ದ ಪ್ರತಿಷ್ಠಿತ ಐಬಿಸಿಸಿಐ ವಾರ್ಷಿಕ ಬಂಟ್ಸ್ ಸ್ಟಾರ್ ಅಚೀವರ್ಸ್ ಅವಾರ್ಡ್-2025 ಕಾರ್ಯಕ್ರಮ ಮುಂಬೈಯ ಐಕಾನಿಕ್ ಹೋಟೆಲ್ ಸಹಾರಾ ಸ್ಟಾರ್‌ನಲ್ಲಿ ಇತ್ತೀಚೆಗೆ ನಡೆಯಿತು.

ಆಲ್ ಕಾರ್ಗೊ ಲಾಜಿಸ್ಟಿಕ್ಸ್‌ನ ಅಧ್ಯಕ್ಷ ಶಶಿಕಿರಣ್ ಶೆಟ್ಟಿ, ಡೆಲಾಯ್ಟ್ ದಕ್ಷಿಣ ಏಷ್ಯಾದ ಸಿಇಒ ರೋಮಲ್ ಶೆಟ್ಟಿ, ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ ಮತ್ತಿತರರು ಭಾಗವಹಿಸಿದ್ದರು.

ಐಬಿಸಿಸಿಐ ಪ್ರಮುಖ ಸದಸ್ಯ ಮತ್ತು ಟಿಡಿಎಫ್ ಡೈಮಂಡ್ ಫ್ಯಾಕ್ಟರಿಯ ಸಹ ಸಂಸ್ಥಾಪಕ ಪ್ರಸನ್ನ ಶೆಟ್ಟಿ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News