×
Ad

ಮಂಗಳೂರು ಮಿಲಾಗ್ರಿಸ್ ಕಾಲೇಜಿಗೆ ಮೂರು ರ‍್ಯಾಂಕ್

Update: 2025-03-11 18:30 IST

ಮಂಗಳೂರು , ಮಾ.11: ಮಂಗಳೂರು ವಿಶ್ವವಿದ್ಯಾಲಯ 2024ರ ಜುಲೈಯಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಮಂಗಳೂರು ಮಿಲಾಗ್ರಿಸ್‌ ಕಾಲೇಜ್‌ನ ಮೂರು ವಿದ್ಯಾರ್ಥಿಗಳು ರ‍್ಯಾಂಕ್ ಗಳಿಸಿದ್ದಾರೆ.

ಬಿ.ಎಸ್ಸಿ. (ಹೋಸ್ಪಿಟ್ಯಾಲಿಟಿ ಸಾಯನ್ಸ್) ವಿಭಾಗದ ಜೆಸ್ಲಿನ್ ಜೇನ್ ರೊಡ್ರಿಗಸ್ ಇವರು ಶೇ 88.98 ಅಂಕಗಳೊಂದಿಗೆ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ. ಈಕೆ ದಾಮಸ್‌ಕಟ್ಟೆ ಎಲ್ಲಿಂಜೆಯ ಫಾನ್ಸಿಸ್ ಐವನ್ ರೊಡ್ರಿಗಸ್ ಹಾಗೂ ಜೆಸಿಂತಾ ರೊಡ್ರಿಗಸ್ ದಂಪತಿ ಸುಪುತ್ರಿ.

ಬಿ.ಎಸ್ಸಿ. (ಫುಡ್ ನ್ಯೂಟ್ರೀಷನ್ ಡಯಟೆಟಿಕ್ಸ್) ವಿಭಾಗದದಲ್ಲಿ ಹಾಜೀರಾ ಎಲ್ಫಾ ಇವರು ಶೇ 91.27 ಅಂಕಗಳೊಂದಿಗೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಈಕೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಮುಹಮ್ಮದ್ ಕಿಫಾಯತುಲ್ಲ ಮುಲ್ಲ ಹಾಗೂ ತಸ್ನೀಮ್ ಬಾನು ದಂಪತಿ ಸುಪುತ್ರಿ.

ಬಿ.ಎಸ್ಸಿ. (ಇಂಟೀರಿಯರ್ ಡಿಝೈನ್ ಆ್ಯಂಡ್ ಡೆಕೊರೇಷನ್) ವಿಭಾಗದಲ್ಲಿ ಸುರಯ್ಯ ಸದಫ್ ಇವರು ಶೇ 91.08 ಅಂಕಗಳೊಂದಿಗೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಈಕೆ ಗುರುಪುರ ಕೈಕಂಬದ ಮುಹಮ್ಮದ್ ಹಾಶೀಮ್ ಹಾಗೂ ರೆಹನಾ ಪರ್ವೀನ್ ದಂಪತಿಯ ಸುಪುತ್ರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News