×
Ad

ಮಂಗಳೂರು: ಜೈಲಿನಲ್ಲಿ ಮೊಬೈಲ್, ಚಾರ್ಜರ್ ಪತ್ತೆ

Update: 2025-03-18 22:40 IST

ಸಾಂದರ್ಭಿಕ ಚಿತ್ರ

ಮಂಗಳೂರು, ಮಾ.18: ನಗರದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಸೋಮವಾರ ತಪಾಸಣೆ ವೇಳೆ ಮೊಬೈಲ್, ಚಾರ್ಜರ್ ಹಾಗೂ ಇತರ ವಸ್ತುಗಳು ಪತ್ತೆಯಾಗಿದೆ.

ಜೈಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಯು ಸೋಮವಾರ ಮಧ್ಯಾಹ್ನ ತಪಾಸಣೆ ನಡೆಸಿದಾಗ ಜೈಲಿನ 3ನೇ ಕೊಠಡಿಯ ಶೌಚಾಲಯದ ಬಳಿ ನೋಕಿಯಾ ಕೀ ಪ್ಯಾಡ್ ಮೊಬೈಲ್ 1, ಕಪ್ಪು ಬಣ್ಣದ ಮೊಬೈಲ್ ಚಾರ್ಜರ್ 1, ಮೊಬೈಲ್ ಬ್ಯಾಟರಿ 1, ಬಿಳಿ ಬಣ್ಣದ ಚಾರ್ಜರ್ ವಯರ್ 1, ಬಿಳಿ ಬಣ್ಣದ ಚಾರ್ಜರ್ ಪಿನ್ 1 ಪತ್ತೆಯಾಗಿದೆ.

ಈ ಬಗ್ಗೆ ಜೈಲು ಅಧೀಕ್ಷಕ ಎಂ.ಎಚ್. ಆಶೇಖಾನ್ ಬರ್ಕೆ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News