×
Ad

ಪಿಲಿಕುಳದಲ್ಲಿ ಭಾರತೀಯ ಉಪಗ್ರಹ ಸುವರ್ಣ ಸಂಭ್ರಮಾಚರಣೆ

Update: 2025-04-19 22:32 IST

ಮಂಗಳೂರು: ಭಾರತದ ಪ್ರಪ್ರಥಮ ಉಪಗ್ರಹ ಆರ್ಯಭಟ ಅಂತರಿಕ್ಷಕ್ಕೆ ತೆರಳಿದ ಘಟನೆಯ ಸುವರ್ಣ ಮಹೋತ್ಸವವನ್ನು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಬೆಂಗಳೂರಿನ ಜವಾಹರ್‌ಲಾಲ್ ನೆಹರು ತಾರಾಲಯದ ಸಹಯೋಗದೊಂದಿಗೆ ಶನಿವಾರ ಆಚರಿಸಲಾಯಿತು.

ಪಿಲಿಕುಳ ಪ್ರಾಧಿಕಾರದ ಆಯುಕ್ತ ಡಾ.ಅರುಣ್ ಕುಮಾರ್ ಶೆಟ್ಟಿ ಎನ್. ಕಾರ್ಯಕ್ರಮವನ್ನು ಉದ್ಘಾಟಿಸಿ ಭಾರತದ ಉಪಗ್ರಹ ತಂತ್ರಜ್ಞಾನದ ವಿಕಾಸವನ್ನು, ಸಾಗಿ ಬಂದ ಹಾದಿಯನ್ನು, ಎದುರಿಸಿದ ಸವಾಲು ಗಳನ್ನು, ಸಾಧನೆಗಳನ್ನು ಸ್ಮರಿಸಿದರು.

ಕೇಂದ್ರದ ನಿರ್ದೇಶಕ ಡಾ. ಕೆ. ವಿ. ರಾವ್ ಅವರು ಆರ್ಯಭಟ ಉಪಗ್ರಹವನ್ನು ನಿರ್ಮಿಸಿ ಪರೀಕ್ಷಿಸುವ ಹಾಗೂ ಕಕ್ಷೆಗೆ ತೆರಳಿದ ನಂತರ ಅದನ್ನು ನಿಭಾಯಿಸುವ ವೇಳೆಯಲ್ಲಿ ಪ್ರೊ. ಯು.ಆರ್.ರಾವ್ ಅವರ ನೇತೃತ್ವದಲ್ಲಿ ಶ್ರಮಿಸಿದ ಉಪಗ್ರಹ, ವಿಜ್ಞಾನಿಗಳಿಗೆ ದೊರೆತ ಅಪಾರ ಅನುಭವದ ಬಗ್ಗೆ, ಭಾರತದ ಬಾಹ್ಯಾಕಾಶ ಚರಿತ್ರೆಯ ಮಜಲುಗಳನ್ನು ಹಾಗೂ ಸಂಶೋಧನೆಯ ಬಗ್ಗೆ ವಿವರಗಳನ್ನು ನೀಡಿದರು.

ನಂತರ ಆರ್ಯಭಟ ಉಪಗ್ರಹದ ಪೇಪರ್ ಮಾದರಿಗಳ ಪ್ರಯೋಗಗಳನ್ನು ವಿದ್ಯಾರ್ಥಿಗಳಿಗೆ ಮಾಡಿ ತೋರಿಸಲಾಯಿತು. ತಾರಾಲಯದಲ್ಲಿ ಗಗನಯಾನದ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಯಿತು.

ಕೇಂದ್ರದ ಕ್ಯುರೇಟರ್ ಜಗನ್ನಾಥ್ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News