×
Ad

ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ‘ವರ್ಟಿಗೋ ಮತ್ತು ಬ್ಯಾಲೆನ್ಸ್ ಕ್ಲಿನಿಕ್’ ಉದ್ಘಾಟನೆ

Update: 2025-04-25 17:27 IST

ಮಂಗಳೂರು: ಯೆನೆಪೋಯ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯ ಕಿವಿ, ಮೂಗು, ಗಂಟಲು ವಿಭಾಗವು ತನ್ನ ಅತ್ಯಾಧುನಿಕ ವರ್ಟಿಗೋ ಮತ್ತು ಬ್ಯಾಲೆನ್ಸ್ ಕ್ಲಿನಿಕ್ ಅನ್ನು ಉದ್ಘಾಟಿಸುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಿತು.

ಈ ಕ್ಲಿನಿಕ್ ಅನ್ನು ಬೆಂಗಳೂರಿನ ಈಕ್ವಿಡರ್ ಮೆಡ್‌ಟೆಕ್‌ನ ಸಂಸ್ಥಾಪಕ ಡಾ. ಶ್ರೀನಿವಾಸ್ ದೊರಸಾಲ ಮತ್ತು ಯೆನೆಪೋಯ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ. ವಿಜಯಕುಮಾರ್ ಅವರು ಉದ್ಘಾಟಿಸಿದರು.

ಇ.ಎನ್‌.ಟಿ ವಿಭಾಗದ ಪ್ರಾಧ್ಯಾಪಕಿ, ವರ್ಟಿಗೋ ಮತ್ತು ಸಮತೋಲನ ಚಿಕಿತ್ಸಾ ತಜ್ಞೆ ಹಾಗು ಸಂಗೀತ ಚಿಕಿತ್ಸಕಿ ಡಾ. ವಿಜಯಲಕ್ಷ್ಮಿ ಸುಬ್ರಮಣ್ಯಂ ಅವರು ಕ್ಲಿನಿಕ್ನ ಸೌಲಭ್ಯಗಳ ಅವಲೋಕನವನ್ನು ಪ್ರಸ್ತುತಪಡಿಸಿ ದರು ಮತ್ತು ವೆಸ್ಟಿಬುಲರ್ ಸೈನ್ಸ್ ಕ್ಷೇತ್ರದಲ್ಲಿ ರೋಗಿಗಳ ಆರೈಕೆ ಮತ್ತು ಶೈಕ್ಷಣಿಕ ಉತ್ಕೃಷ್ಟತೆಯನ್ನು ಹೆಚ್ಚಿಸುವಲ್ಲಿ ಅದರ ಪಾತ್ರವನ್ನು ಒತ್ತಿ ಹೇಳಿದರು.

ಕ್ರ್ಯಾನಿಯೊಕ್ಯುಲೋಗ್ರಫಿ (COG/VNG), ಫಂಕ್ಷನಲ್ ಹೆಡ್ ಇಂಪಲ್ಸ್ ಟೆಸ್ಟ್ (fHIT), ಸ್ಟೆಬಿಲೋಮೆಟ್ರಿ (Stabilometry) ಮತ್ತು ಕ್ರಾನಿಯೊಕಾರ್ಪೋಗ್ರಫಿ (CCG) ಸೇರಿದಂತೆ ರೋಗನಿರ್ಣಯ ಮತ್ತು ರೋಗಿಗಳ ಪುನಸ್ಚೇತನ ಅತ್ಯಾಧುನಿಕ ಮೌಲ್ಯಮಾಪನದ ಉಪಕರಣಗಳು ಇಲ್ಲಿ ಲಭ್ಯವಿದೆ. ಇದಲ್ಲದೆ ಇಲ್ಲಿ ವರ್ಚುಯಲ್ ರಿಯಾಲಿಟಿ ಆಧಾರಿತ ವೆಸ್ಟಿಬ್ಯುಲಾರ್ ಪುನಸ್ಚೇತನ ಚಿಕಿತ್ಸೆಯು ಕೂಡ ಲಭ್ಯವಿದೆ. ಈ ಸೌಲಭ್ಯವು ಮೀಸಲಾದ ಫಾಲ್ ರಿಸ್ಕ್ ಅಸೆಸ್‌ಮೆಂಟ್ ಮತ್ತು ಫಾಲ್ ಪ್ರಿವೆನ್ಶನ್ ಕ್ಲಿನಿಕ್ ಅನ್ನು ಸಹ ಹೊಂದಿದೆ, ಇದು ವಯಸ್ಸಾದವರ ಆರೈಕೆ ಮತ್ತು ನರರೋಗಶಾಸ್ತ್ರದ ಅಭ್ಯಾಸದಲ್ಲಿನ ಅತ್ಯಂತ ಮಹತ್ವದ ಕಾಳಜಿಯನ್ನು ವಹಿಸುತ್ತದೆ.

ತರಬೇತಿ ಪಡೆದ ವರ್ಟಿಗೋ ಮತ್ತು ಸಮತೋಲನ ತಜ್ಞರ ತಂಡದೊಂದಿಗೆ, ವಿಭಾಗವು ಈ ನಿರ್ದಿಷ್ಟ ಕ್ಷೇತ್ರದಲ್ಲಿ ಶೈಕ್ಷಣಿಕ ತರಬೇತಿಯಲ್ಲಿ ಮುಂಚೂಣಿಯಲ್ಲಿದೆ. ತಲೆತಿರುಗುವಿಕೆ ಮತ್ತು ಸಮತೋಲನ ಅಸ್ವಸ್ಥತೆಗಳಲ್ಲಿ ತನ್ನ ಸರ್ಟಿಫಿಕೇಟ್ ಕೋರ್ಸ್‌ಗಳ ಮೂಲಕ, ವಿಭಾಗವು ಭಾರತ ಮತ್ತು ವಿದೇಶಗಳಿಂದ 1,000 ಕ್ಕೂ ಹೆಚ್ಚು ವೈದ್ಯರಿಗೆ ತರಬೇತಿ ನೀಡಿದೆ - ಇದು ದೇಶದ ಯಾವುದೇ ವಿಶ್ವವಿದ್ಯಾಲಯಕ್ಕೆ ಹೋಲಿಸಲಾಗದ ಏಕೈಕ ಸಾಧನೆಯಾಗಿದೆ.

ಈ ಸಂದರ್ಭದಲ್ಲಿ ಯೆನೆಪೊಯ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ರಾದ ಡಾ. ಗಂಗಾಧರ ಸೋಮಯಾಜಿ, ಯೆನೆಪೊಯ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ರಾದ ಡಾ. ಎಂ.ಎಸ್. ಮೂಸಬ್ಬ, ಇ.ಎನ್‌.ಟಿ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ಸಾಯಿಮನೋಹರ್‌ ಉಪಸ್ಥಿತರಿದ್ದರು.

ಈ ಸಂದರ್ಭ ಸ್ಮರಣಾರ್ಥವಾಗಿ, ವಿಭಾಗವು ವೆಸ್ಟಿಬುಲರ್ ಸೈನ್ಸಸ್ ಮತ್ತು ಸರ್ಜರಿಯಲ್ಲಿನ ಪ್ರಗತಿಗಳ ಕುರಿತು ವೈದ್ಯಕೀಯ ಶಿಕ್ಷಣ (ಅಒಇ) ಕಾರ್ಯಕ್ರಮವನ್ನು ಆಯೋಜಿಸಿತು. ಪ್ರಖ್ಯಾತ ಇ.ಎನ್‌.ಟಿ ತಜ್ಞರು, ಏಷ್ಯನ್ ಇಎನ್‌ಟಿ ಆಸ್ಪತ್ರೆ’ ವಿಶಾಖಪಟ್ಟಣದ ನಿರ್ದೇಶಕ ಡಾ. ಪ್ರದೀಪ್ ವುಂಡವಳ್ಳಿ ಮತ್ತು ಯೆನೆಪೊಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಶ್ರೀನಿವಾಸ್ ದೊರಸಾಲ ಅವರು ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.




Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News