×
Ad

ಅಂತರಾಷ್ಟ್ರೀಯ ಡಾಡ್ಜ್ ಬಾಲ್ ಚಾಂಪಿಯನ್ ಶಿಪ್: ಮಲೇಶಿಯಾ ಪ್ರಥಮ, ಭಾರತ ದ್ವಿತೀಯ

Update: 2025-04-28 20:11 IST

ಬಂಟ್ವಾಳ ; ಮಾಣಿ - ಪೆರಾಜೆಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಅಂತರಾಷ್ಟ್ರೀಯ ಡಾಡ್ಜ್‌ಬಾಲ್ ಚಾಂಪಿಯನ್‌ಶಿಪ್ ನಲ್ಲಿ ಮಲೇಶಿಯಾ ತಂಡ ಪ್ರಥಮ,  ಭಾರತೀಯ ತಂಡ ದ್ವಿತೀಯ ಹಾಗೂ ನೇಪಾಳ ತಂಡ ತೃತೀಯ ಸ್ಥಾನವನ್ನು ಗಳಿಸಿತು.

ಭಾರತೀಯ ಡಾಡ್ಜ್‌ಬಾಲ್ ಫೆಡರೇಶನ್‌ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಡಾಡ್ಜ್‌ಬಾಲ್ ಅಸೋಸಿಯೇಷನ್ ಹಾಗೂ ದಕ್ಷಿಣ ಕನ್ನಡ ಡಾಡ್ಜ್‌ಬಾಲ್ ಅಸೋಸಿಯೇಷನ್‌ನ ಸಹಯೋಗದೊಂದಿಗೆ ಇದೇ ಮೊದಲ ಬಾರಿಗೆ ಭಾರತದಲ್ಲಿ ಆಯೋಜಿಸಲಾಗಿದ್ದ ಈ ಅಂತರಾಷ್ಟ್ರೀಯ ಚಾಂಪಿಯ್ನ ಶಿಪ್‌ ರವಿವಾರ ಸಮಾಪನಗೊಂಡಿತು.

ಎರಡು ದಿನಗಳ ಕಾಲ ನಡೆದ ರೋಚಕ ಪಂದ್ಯಾವಳಿಗಳ ನಂತರ, ವಿಜೇತ ತಂಡಗಳಿಗೆ ರವಿವಾರ ರಾತ್ರಿ ನಡೆದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News